ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಮತಗಟ್ಟೆಗಳಲ್ಲಿ ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಾಜ್ಯ ಚುನಾವಣೆ ಕಮೀಷನರ್ ವಿ.ಭಾಸ್ಕರನ್ ತಿಳಿಸಿದರು.
ಮತಗಟ್ಟೆಗಳನ್ನು ಮತದಾನದ ಹಿಂದಿನ ದಿನ ರೋಗಾಣುಮುಕ್ತ ಚಟುವಟಿಕೆ ನಡೆಸಬೇಕು. ಮತಗಟ್ಟೆಯ ಹೊರಬದಿ ನೀರು, ಸಾಮಾನು ಇತ್ಯಾದಿ, ಒಳಬದಿ ಸಾನಿಟೈಸರ್ ಕಡ್ಡಾಯವಾಗಿ ಇರಿಸಬೇಕು. ಮತಗಟ್ಟೆಗೆ ಪ್ರವೇಶಿಸುವ ವೇಳೆ , ಮತದಾನ ನಡೆಸಿ ಮರಳುವ ವೇಳೆ ಪೆÇೀಲಿಂಗ್ ಸಹಾಯಕರು ಸಾನಿಟೈಸರ್ ಒದಗಿಸುವರು. ಪೆÇೀಲಿಂಗ್ ಸಿಬ್ಬಂದಿಗೆ ಫೇಸ್ ಶೀಲ್ಡ್, ಮಾಸ್ಕ್, ಗ್ಲೌಸ್ ಧಾರಣೆ, ಸಾನಿಟೈಸರ್ ಕಡ್ಡಾಯ.
ಮತಗಟ್ಟೆಗಳ ಮುಂದೆ ಮತದಾತರು ಸಾಮಾಜಿಕ ಅಂತರ ಕಾಯ್ದುಕೊಂಡು ಸಾಲಾಗಿ ನಿಲ್ಲಬೇಕು. ಇದಕ್ಕೆ ಪೂರಕವಾಗಿ ನಿಗದಿತ ಅಂತರದಲ್ಲಿ ಪ್ರತ್ಯೇಕ ಮಾರ್ಕ್ ನಡೆಸಲಾಗುವುದು. ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಸಾಲುಗಳು ಇರುವುವು. ವಿಶೇಷಚೇತನರು, ರೋಗ ಬಾಧಿತರು, 70 ವರ್ಷಕ್ಕಿಂತ ಮೇಲ್ಪಟ್ಟವರು ಮೊದಲಾದವರು ಸಾಲಾಗಿ ನಿಲ್ಲಬೇಕಿಲ್ಲ. ಮತಗಟ್ಟೆಯಲ್ಲಿ ಏಕಕಾಲಕ್ಕೆ ಮೂವರು ಮತದಾತರಿಗೆ ಮಾತ್ರ ಪ್ರವೇಶಾತಿ ಇರುವುದು. ಮತಗಟ್ಟೆಗಳಿಗೆ ಪ್ರವೇಶಿಸುವ ವೇಳೆ ಗುರುತುಚೀಟಿ ಹಾಜರುಪಡಿಸಿ ಖಚಿತಪಡಿಸಬೇಕು. ಮತದಾತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಗುರುತಿಸುವಿಕೆಯ ವೇಳೆ ಮಾತ್ರ ಅಗತ್ಯಬಿದ್ದಲ್ಲಿ ಒಮ್ಮೆ ಮಾಸ್ಕ್ ತೆರವುಗೊಳಿಸಬವೇಕು. ನೋಂದಣಿ ಪುಸ್ತಕದಲ್ಲಿ ಬೆರಳಚ್ಚು ನೀಡಬೇಕು. ಮತದಾತರ ಬೆರಳಲ್ಲಿ ಶಾಯಿಯಿಂದ ಮತದಾನದ ಗುರುತು ನಡೆಸಲಾಗುವುದು.
ಒಂದು ಮತಗಟ್ಟೆಯಲ್ಲಿ 4 ಮಂದಿ ಪೆÇೀಲಿಂಗ್ ಅಧಿಕಾರಿಗಳು, ಒಬ್ಬ ಪೆÇೀಲಿಂಗ್ ಸಹಾಯಕ, ಒಬ್ಬ ಪೆÇಲೀಸ್ ಸಿಬ್ಬಂದಿ ಇರುವರು. ಅಬ್ಯರ್ಥಿಯ ಏಜೆಂಟರು ಹತ್ತಕ್ಕಿಂತ ಅಧಿಕ ಸಂಖ್ಯೆಯಲ್ಲಿ ಇರಕೂಡದು. ಪೆÇೀಲಿಂಗ್ ಏಜೆಂಟರು ಕುಳಿತುಕೊಳ್ಳುವ ಕಡೆ ಸಾಮಾಜಿಕ ಅಂತರ ಇರಬೇಕು.