ಕಾಸರಗೊಡು: ಬದಿಯಡ್ಕ ಕೃಷಿಭವನ ವ್ಯಾಪ್ತಿಯಲ್ಲಿ ಕಾಳುಮೆಣಸು ಪುನಶ್ಚೇತನ ಯೋಜನೆ ಪ್ರಕಾರ ಕೃಷಿ ನಡೆಸುವವರ ಸೌಲಭ್ಯಕ್ಕಾಗಿ ಅರ್ಜಿ ಕೋರಲಾಗಿದೆ. ಕನಿಷ್ಠ 25 ಸೆಂಟ್ಸ್ ಜಾಗದಲ್ಲಿ ಕೃಷಿ ನಡೆಸುವ ಕೃಷಿಕರು 2020-21ನೇ ವರ್ಷದ ಕೃಷಿ ರಶೀದಿಯ ನಕಲು, ಆಧಾರ್ ಕಾರ್ಡ್ ನಕಲು, ಬ್ಯಾಂಕ್ ಪಾಸ್ ಪುಸ್ತಕ ನಕಲು ಸಹಿತ ಡಿ.24ರ ಮುಂಚಿತವಾಗಿ ಕೃಷಿ ಭವನಕ್ಕೆ ಹಾಜರಾಗಬೇಕು ಎಂದು ತಿಳಿಸಲಾಗಿದೆ.