ಕಾಸರಗೋಡು: ವಿಶೇಷ ಅಂಚೆ ಮತಪತ್ರಕ್ಕೆ ಅರ್ಹರಾಗಿರುವ ಎಲ್ಲರಿಗೂ ಬಾಲೆಟ್ ಪೇಪರ್ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಅಂಗೀರಿಸಿರುವ ಸರ್ಟಿಫೈಡ್ ಲಿಸ್ಟ್ ನಲ್ಲಿರುವ ಕೋವಿಡ್ ಪಾಸಿಟಿವ್ ರೋಗಿಗಳಿಗೆ ಮತ್ತು ನಿಗಾದಲ್ಲಿರುವ ಮಂದಿಗೆ ವಿಶೇಷ ಅಂಚೆಮತಪತ್ರ ಒದಗಿಸಲಾಗುತ್ತದೆ. ನೇರವಾಗಿ ತೆರಳಿ ಯಾ ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾಗದೇ ಇರುವ ಮಮದಿಗೆ ಟಪ್ಪಾಲು ಮೂಲಕ ಅಂಚೆ ಮತಪತ್ರ ತಲಪಿಸಲಾಗುತ್ತದೆ. ಟಪ್ಪಾಲು ಮೂಲಕ ಪೆÇೀಸ್ಟಲ್ ಬಾಲೆಟ್ ಲಭಿಸುವ ಮಂದಿ ಮತದಾನ ನಡೆಸಿ ಮತ ಎಣಿಕೆಯ ದಿನವಾಗಿರುವ ಡಿ.16ರಂದು ಬೆಳಗ್ಗೆ 8 ಗಂಟೆಗೆ ಮುಂಚಿತವಾಗಿ ಚುನಾವಣೆ ಅಧಿಕಾರಿಗೆ ಮರಳಿ ತಲಪಿಸುವ ನಿಟ್ಟಿನಲ್ಲಿ ಅಗತ್ಯದ ಕ್ರಮಗಳನ್ನು ಕೈಗೊಳ್ಳಬೇಕು ಎಂದವರು ತಿಳಿಸಿರುವರು.