ಕಾಸರಗೋಡು: ಕುಂಬಳೆ ಕಣಿಪುರ ಕ್ಷೇತ್ರದ ಜಾತ್ರೆ, ಬೆಡಿ ಉತ್ಸವಗಳಿಗೆ ಅನುಮತಿಗಾಗಿ ಮನವಿ ಸಲ್ಲಿಸಲಾಗಿದ್ದು, ಈ ಸಂಬಂಧ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾ ಮಟ್ಟದ ಕೋರ್ ಸಮಿತಿ ಸಭೆ ನಿರ್ಧರಿಸಿದೆ. ಧಾರ್ಮಿಕ ಅನುಷ್ಠಾನ ಇತ್ಯಾದಿಗಳನ್ನು ಕೋವಿಡ್ ಸಂಹಿತೆಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿಕೊಂಡು, ಅನಿವಾರ್ಯ ಮಂದಿ ಮಾತ್ರ ಭಾಗವಹಿಸಿ ನಡೆಸಬಹುದು ಎಂದು ತಿಳಿಸಲಾಗಿದೆ.
ಬೇಕಲ ಕೋಟೆಯ ಲೈಟ್ ಆಂಡ್ ಸೌಂಡ್ ಶೋ ದಿನ ಬಿಟ್ಟಿ ದಿನ ಮಾತ್ರ: ಪ್ರವೇಶಾತಿ 100 ಮಂದಿಗೆ ಮಾತ್ರ
ಬೇಕಲ ಕೋಟೆಯ ಲೈಟ್ ಆಂಡ್ ಸೌಂಡ್ ಶೋ ದಿನ ಬಿಟ್ಟಿ ದಿನ ಮಾತ್ರ. ಪ್ರವೇಶಾತಿ 100 ಮಂದಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.