ಮುಳ್ಳೇರಿಯ: ಕೋವಿಡ್ ಭೀತಿಯ ಅವಧಿಯಲ್ಲೂ ಚುನಾವಣೆ ಪ್ರಕ್ರಿಯೆ ಸುಗಮಗೊಳಿಸಲು ವಿಶೇಷ ಅಂಚೆ ಮತ ಸೌಲಭ್ಯ ಪೂರಕವಾಗಿದೆ. ಈ ನಿಟ್ಟಿನಲ್ಲಿ ಕಾರಡ್ಕ ಬ್ಲಾಕ್ ಪಂಚಾಯತಿಯಯಲ್ಲಿ ಉತ್ತಮ ಸ್ಪಂದನ ಲಭಿಸಿದೆ.
ಕಾರಡ್ಕ ಬ್ಲಾಕ್ ನಲ್ಲಿ 28 ಕೋವಿಡ್ ಪಾಸಿಟಿವ್ ರೋಗಿಗಳಿದ್ದಾರೆ. 146 ಮಂದಿ ಕ್ವಾರೆಂಟೈನ್ ಪ್ರವೇಶಿಸಿದ್ದಾರೆ. ಮಲೆನಾಡ ವಲಯಗಳು ಸೇರಿರುವ ಬ್ಲೋಕ್ ಪಂಚಾಯತ್ ನಲ್ಲಿ 7 ಗ್ರಾಮ ಪಂಚಾಯತ್ ಗಳಲ್ಲಿ 5 ಪಂಚಾಯತ್ ಗಳಲ್ಲೂ ವಿಶೇಷ ಅಂಚೆ ಮತದಾನ ಸೌಲಭ್ಯ ಅಗತ್ಯವಿರುವ ಜನರಿದ್ದಾರೆ. ಬೇಡಡ್ಕ, ಕಾರಡ್ಕ, ಕುತ್ತಿಕೋಲು, ದೇಲಂಪಾಡಿ, ಕುಂಬಡಾಜೆ ಪಂಚಾಯತ್ ಗಳಲ್ಲಿ 146 ಮಂದಿ ಈ ಸಾಲಿನಲ್ಲಿದ್ದಾರೆ.
ತಲಾ ಇಬ್ಬರು ಸಿಬ್ಬಂದಿಯಿರುವ 4 ತಂಡಗಳು ಈ ದೌತ್ಯದೊಂದಿಗೆ ರಂಗದಲ್ಲಿದ್ದಾರೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ನೇಮಿಸಿರುವ ಚುನಾವಣೆ ಹೊಣೆಗಾರಿಕೆಯ ಸಿಬ್ಬಂದಿ, ಪಂಚಾಯತ್ ಕಾರ್ಯದರ್ಶಿ, ಪೆÇಲೀಸ್ ಸಿಬ್ಬಂದಿ, ಸ್ಥಳೀಯ ಆಶಾ ಕಾರ್ಯಕರ್ತರು ಈ ತಂಡದಲ್ಲಿದ್ದಾರೆ.
ಮುಂಚಿತವಾಗಿ ಕರೆಮಾಡಿ ಪ್ರತಿ ಕುಟುಂಬವನ್ನು ಈ ಸಿಬ್ಬಂದಿ ಸಂಪರ್ಕಸುತ್ತಾರೆ. ಆರಂಭ ಹಂತದಲ್ಲಿ ಪ್ರತಿವ್ಯಕ್ತಿಗೆ 25 ನಿಮಿಷ ಅವಧಿಯನ್ನು ವಿಶೇಷ ಅಂಚೆ ಮತದಾನ ನಡೆಸುವ ನಿಟ್ಟಿನಲ್ಲಿ ಅಗತ್ಯವಿರುತ್ತದೆ. ಮೊದಲ ದಿನ 15 ಮಂದಿ ಈ ರೀತಿ ಮತದಾನ ನಡೆಸಿದ್ದಾರೆ. ಇಲ್ಲಿನ ಜನ ಈ ನಿಟ್ಟಿನಲ್ಲಿ ಜಾಗೃತಿ ಹೊಂದಿದ್ದಾರೆ. ಅವರು ಉತ್ತಮ ರೀತಿ ಸ್ಪಂದಿಸುತ್ತಿದ್ದಾರೆ ಎಂದು ಕಾರಡ್ಕ ಬ್ಲೋಕ್ ಮಟ್ಟದ ರಿಟನಿರ್ಂಗ್ ಆಪೀಸರ್ ಕೆ.ಕೆ.ಸುನಿಲ್ ತಿಳಿಸಿರುವರು.
ಮೊದಲ ದಿನ ಬೇಡಡ್ಕ ಗ್ರಾಮ ಪಂಚಾಯತ್ ನಲ್ಲಿ ರಚನೆಗೊಂಡಿರುವ ಕೋವಿಡ್ ಕ್ಲಸ್ಟರ್ ನಲ್ಲಿ, ಎರಡನೇ ದಿನ ದೇಲಂಪಾಡಿ, ಕುತ್ತಿಕೋಲು, ಕುಂಬಡಾಜೆ ಗ್ರಾಮ ಪಂಚಾಯತ್ ಗಳಲ್ಲೂ ಈ ಚಟುವಟಿಕೆಗಳು ನಡೆದಿವೆ. ಎರಡು ತಂಡಗಳು ಒಂದು ದಿನ ಚಟುವಟಿಕೆ ನಡೆಸಿ ಮರುದಿನ ವಿಶ್ರಾಂತಿ ಪಡೆಯುತ್ತವೆ. ಆ ದಿನ ಇನ್ನೊಂದು ತಂಡಕ್ಕೆ ಈ ಹೊಣೆ ಇರುತ್ತದೆ.
ಪಿ.ಪಿ.ಇ. ಕಿಟ್, ಗ್ಲೌಸ್, ಶೀಲ್ಡ್ ಇತ್ಯಾದಿ ಬಳಸಿ ಕರ್ತವ್ಯ ನಡೆಸುವ ಸಿಬ್ಬಂದಿ , ಪ್ರತಿ ಕರ್ತವ್ಯ ಕಳೆದ ಮೇಲೆ ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವರು ಧರಿಸಿದ್ದ ಪಿ.ಪಿ.ಇ. ಕಿಟ್ ಸಹಿತ ಸಾಮಾಗ್ರಿಗಳನ್ನು ಕಳಚುತ್ತಾರೆ. ಸುರಕ್ಷೆ ಸೌಲಭ್ಯಗಳನ್ನು ಕಳಚಿರಿಸಿ ಸಂಸ್ಕರಣೆ ನಡೆಸಲಾಗುತ್ತದೆ. ವಾಹನವನ್ನು ರೋಗಾಣುಮುಕ್ತಗೊಳಿಸಿ, ನಂತರದ ಯಾತ್ರೆ ನಡೆಸಲಾಗುತ್ತದೆ.