ಕಾಸರಗೋಡು: ಜೈಲು ಮೆನುವಿನಲ್ಲಿ ಬದಲಾವಣೆ ಮಾಡಬೇಕೆಂದು ಕೈದಿಗಳು ಒತ್ತಾಯಿಸಿದ್ದಾರೆ. ಜೈಲು ಅಧಿಕಾರಿಗಳು ಕೈದಿಗಳ ಬೇಡಿಕೆಯನ್ನು ಜೈಲು ಇಲಾಖೆಗೆ ಹಸ್ತಾಂತರಿಸಲಾಗಿದೆ.
ಮಂಗಳವಾರ, ಗುರುವಾರ ಮತ್ತು ಶುಕ್ರವಾರಗಳಂದು ಕೈದಿಗಳಿಗೆ ನೀಡಲಾಗುವ ಮುಖ್ಯ ಪದಾರ್ಥಗಳಲ್ಲಿ ಅವಿಲ್ ಪ್ರಮುಖವಾದುದು. ಆದರೆ ಪ್ರಸ್ತುತ ಪ್ರತಿನಿತ್ಯವೂ ಅವಿಲ್ ನಷ್ಟೇ ಕೈದಿಗಳಿಗೆ ನೀಡಲಾಗುತ್ತಿದ್ದು ಇದರಿಂದ ರುಚಿಕೆಟ್ಟಿರುವ ಕೈದಿಗಳು ತಮಗೆ ಪ್ರತಿನಿತ್ಯವೂ ಅವಿಲ್ ಬೇಡವೆಂಬ ಬೇಡಿಕೆ ಇರಿಸಿದ್ದರು. ಪ್ರತಿ ಶನಿವಾರ ಬಡಿಸುವ ಮಟನ್ ಕರಿಯ ಬದಲು ಚಿಕನ್ ಕರಿ ಯಾಗಿ ಬದಲಾಯಿಸಲು ಈಹಿಂದೆಯೇ ಸೂಚಿಸಲಾಗಿತ್ತಾದರೂ ಅದನ್ನು ಜಾರಿಗೆ ತರಲಾಗಿಲ್ಲ ಎನ್ನಲಾಗಿದೆ.