ಅಂಬಲಪುಳ: ಪಶುವೈದ್ಯಕೀಯ ಆಸ್ಪತ್ರೆಗೆ ವೈದ್ಯರು ಆಗಮಿಸದೆ ಭಾರೀ ಸಂಕಷ್ಟಕ್ಕೊಳಗಾದ ಗ್ರಾಮಸ್ಥರು ಕೊನೆಗೆ ಸಾಕು ಪ್ರಾಣಿಗಳೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ನಿನ್ನೆ ಅಂಬಲಪುಳದಲ್ಲಿ ನಡೆದಿದೆ. ಪಳಯಂಗಾಡಿ ಜಂಕ್ಷನ್ ಬಳಿಯ ಪುರಕ್ಕಾಡ್ ಪಶುವೈದ್ಯಕೀಯ ಆಸ್ಪತ್ರೆ ಮುಂಭಾಗ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಸಾಕು ಪ್ರಾಣಿಗಳಿಗೆ ಚುಚ್ಚುಮದ್ದು ನೀಡುವ ದಿನವಾದ ನಿನ್ನೆ ಅನೇಕ ಮಂದಿ ತಮ್ಮ ಶ್ವಾನಗಳು ಮತ್ತು ಹಸುಗಳೊಂದಿಗೆ ಪಶುವೈದ್ಯಕೀಯ ಆಸ್ಪತ್ರೆಗೆ ಆಗಮಿಸಿದ್ದರು. ಆದರೆ ಮಧ್ಯಾಹ್ನವಾದರೂ ಪಶು ವೈದ್ಯರ ಪತ್ತೆ ಇಲ್ಲವಾದ್ದರಿಂದ ಬಸವಳಿದ ಜನರು ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ಬಳಿಕ ಅಂಬಲಪುಳ ಎಸ್‍ಐ ನೇತೃತ್ವದ ಪೆÇಲೀಸರು ಪಶುವೈದ್ಯರನ್ನು ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಿಲ್ಲ. ವೈದ್ಯರು ನಿಯಮಿತವಾಗಿ ಇಲ್ಲಿಗೆ ಬರುವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಲಸಿಕೆಯನ್ನು ದೊಡ್ಡ ವೆಚ್ಚದಲ್ಲಿ ಖರೀದಿಸಿದರೂ ವೈದ್ಯರಿಲ್ಲದೆ ಅದನ್ನು ಪ್ರಾಣಿಗಳಿಗೆ ನೀಡುವಂತಿಲ್ಲ. ಆಸ್ಪತ್ರೆಯಲ್ಲಿ ಹುಳದ ಮಾತ್ರೆಗಳು ಕೂಡಾ ಕಳೆದ ಅನೇಕ ಕಾಲಗಳಿಂದ ಲಭ್ಯವಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ವೈದ್ಯರು ಹೊರಗೆ ತೆರಳಿದ್ದಾರೆ ಎಂಬ ಫಲಕವನ್ನು ಯಾವಾಗಲೂ ಆಸ್ಪತ್ರೆಯ ಮುಂದೆ ತೂಗಿಸಲಾಗುತ್ತದೆ. ಯಾವುದಾದರೂ ತುರ್ತು ಉದ್ದೇಶಕ್ಕಾಗಿ ಕರೆ ಮಾಡಲು ವೈದ್ಯರ ಫೆÇೀನ್ ಸಂಖ್ಯೆಯನ್ನು ಬೋರ್ಡ್‍ನಲ್ಲಿ ಬರೆಯಲಾಗಿದೆ ಎಂದು ಅವರು ಹೇಳುತ್ತಾರೆ, ಆದರೆ ವೈದ್ಯರು ಪೋನ್ ಕೂಡಾ ಸ್ವೀಕರಿಸುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.