ಕಲ್ಪೆಟ್ಟ: ಕೋವಿಡ್ ನಿಂದ ಚೇತರಿಸಿಕೊಂಡ ಬಳಿಕ ಜನರು ಎದುರಿಸುತ್ತಿರುವ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಭಾರತದಲ್ಲಿ ಮೊದಲ ಬಾರಿಗೆ ಆಸ್ಟರ್ ವಯನಾಡ್ ಪೆÇೀಸ್ಟ್ ಕೋವಿಡ್ ರಿಜ್ಯುವಿನೇಶನ್ (ಪುನರ್ವಸತಿ) ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.
ಆಧುನಿಕ ಔಷಧ, ಆಯುರ್ವೇದ, ಯೋಗ, ವಿಹಾರ ಮತ್ತು ಜಾನಪದ ಕಲೆಗಳನ್ನು ಸಂಯೋಜಿಸುವ ಚಿಕಿತ್ಸಾ ಪ್ಯಾಕೇಜ್ ನ್ನು ಆಸ್ಟರ್ ವಯನಾಡ್ ಕೇಂದ್ರದಲ್ಲಿನ ಪುನರ್ವಸತಿ ಕೇಂದ್ರ ಪರಿಚಯಿಸುತ್ತಿದೆ.
ಕೇಂದ್ರವನ್ನು ಡಿಸೆಂಬರ್ 7 ರಂದು ಸಂಜೆ 4 ಗಂಟೆಗೆ ಆಸ್ಟರ್ ಡಿ.ಎಂ ಹೆಲ್ತ್‍ಕೇರ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಆಝಾದ್ ಮೂಪ್ಪನ್ ಅವರ ಉಪಸ್ಥಿತಿಯಲ್ಲಿ ಸೂರ್ಯ ಸ್ಟೇಜ್ ಆಂಡ್ ಪಿಲ್ಮ್ ಸೊಸೈಟಿಯ ಸ್ಥಾಪಕ ನಿರ್ದೇಶಕಿ ಸೂರ್ಯ ಕೃಷ್ಣಮೂರ್ತಿ ಅವರು ಆನ್‍ಲೈನ್‍ನಲ್ಲಿ ಉದ್ಘಾಟಿಸುವರು. ಆಸ್ಟರ್ ಇಂಡಿಯಾ ಸಿಇಒ ಡಾ.ಕೆ.ಎಸ್. ಹರೀಶ್ ಪಿಳ್ಳೈ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಸಮಾರಂಭದಲ್ಲಿ ರಿಜಿವ್ ಆರ್ಟ್ ಆಸ್ಟರ್ ವಯನಾಡ್ ವೆಬ್ ಪುಟವನ್ನು ಡಿ.ಎಂ. ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ಕಾರ್ಯನಿರ್ವಾಹಕ ಟ್ರಸ್ಟಿ ಬಶೀರ್ ಯು, ಆಸ್ಟರ್ ಮಿಮ್ಸ್ ಕಣ್ಣೂರು, ಕ್ಯಾಲಿಕಟ್ ಮತ್ತು ಕೊಟ್ಟಕಲ್ ಕ್ಲಸ್ಟರ್ ಸಿಇಒ ಫರ್ಹಾನ್ ಯಾಸಿನ್ ಅವರು ಲೋಕಾರ್ಪಣೆಗೊಳಿಸುವರು.
ಆಸ್ಟರ್ ಮಿಮ್ಸ್ ಕೋಝಿಕ್ಕೋಡ್ ಸಲಹೆಗಾರ ನರ ಶಸ್ತ್ರಚಿಕಿತ್ಸಕ ಡಾ. ಜಾಕೋಬ್ ಅಲಪ್ಪತ್ ಕಾಪೆರ್Çರೇಟ್ ವಿಡಿಯೋ ಬಿಡುಗಡೆ ಮಾಡಲಿದ್ದಾರೆ. ವಯನಾಡ್ ಡಿಟಿಪಿಸಿ ಸದಸ್ಯ ಕಾರ್ಯದರ್ಶಿ ಬಿ. ಆನಂದ್ ಮತ್ತು ವಯನಾಡ್ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ವಂಚೀಶ್ವರನ್ ಕೂಡ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ಯಾಕೇಜ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 7591966333 ಗೆ ಕರೆ ಮಾಡಬಹುದಾಗಿದೆ.