ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ವಿಸ್ತೃತ ಸುರಕ್ಷೆ ಸೌಲಭ್ಯಗಳನ್ನು ಸಿದ್ಧಪಡಿಸಿರುವುದಾಗಿ ಜಿಲ್ಲಾ ಪೋಲೀಸರು ತಿಳಿಸಿದರು.
ಜಿಲ್ಲೆಯನ್ನು 8 ಪೆÇಲೀಸ್ ಸಬ್ ಡಿವಿಝನ್ ಗಳಾಗಿ ವಿಂಗಡಿಸಿ ಪ್ರತಿಯೊಂದಕ್ಕೂ ಡಿ.ವೈ.ಎಸ್.ಪಿ. ರಾಂಕ್ ನಲ್ಲಿರುವ ಅಧಿಕಾರಿಗೆ ಹೊಣೆ ವಹಿಸಲಾಗಿದೆ. ಮಂಜೇಶ್ವರ, ಕುಂಬಳೆ ಠಾಣೆಗಳನ್ನು ಒಳಗೊಂಡು ಕುಂಬಳೆ ಸಬ್ ಡಿವಿಝನ್, ಕಾಸರಗೋಡು, ಮೇಲ್ಪರಂಬ ಠಾಣೆಗಳನ್ನು ಒಳಗೊಂಡು ಕಾಸರಗೋಡು ಸಬ್ ಡಿವಿಝನ್, ವಿದ್ಯಾನಗರ, ಬದಿಯಡ್ಕ ಠಾಣೆಗಳನ್ನು ಒಳಗೊಂಡು ಬದಿಯಡ್ಕ ಸಬ್ ಡಿವಿಝನ್, ಆದೂರು, ಬೇಡಗಂ ಠಾಣೆಗಳನ್ನು ಒಳಗೊಂಡು ಆದೂರು ಸಬ್ ಡಿವಿಝನ್, ಬೇಕಲ, ಅಂಬಲತ್ತರ ಠಾಣೆಗಳನ್ನು ಒಳಗೊಂಡು ಬೇಕಲ ಸಬ್ ಡಿವಿಝನ್, ಹೊಸದುರ್ಗ , ನೀಲೇಶ್ವರ ಠಾಣೆಗಳನ್ನು ಒಳಗೊಂಡು ಹೊಸದುರ್ಗ ಸಬ್ ಡಿವಿಝನ್, ಚಂದೇರ, ಚೀಮೇನಿ ಠಾಣೆಗಳನ್ನು ಒಳಗೊಂಡು ಚಂದೇರ ಸಬ್ ಡಿವಿಝನ್, ವೆಳ್ಳರಿಕುಂಡ್, ಚಿತ್ತಾರಿಕಲ್ಲ್, ರಾಜಪುರಂ ಠಾಣೆಗಳನ್ನು ಒಳಗೊಂಡು ರಾಜಪುರಂ ಸಬ್ ಡಿವಿಝನ್ ಎಂಬ ರೀತಿ ಸುರಕ್ಷೆ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ.
ಪೆÇಲೀಸ್ ಸುರಕ್ಷೆ ಕ್ರಮಗಳು:
ಕಾಸರಗೊಡು ಜಿಲ್ಲೆಯಲ್ಲಿ ಎಸ್.ಐ./ಎ.ಎಸ್.ಐ. ಗಳ ನೇತೃತ್ವದಲ್ಲಿ 76 ಗುಂಪು ಗಸ್ತು ಚುನಾವನೆಯ ಹಿಂದಿನ ದಿನ ಬೆಳಗ್ಗಿನಿಂದ ಆರಂಭಗೊಳ್ಳಲಿದೆ. ಪ್ರತಿ ಪೆÇಲೀಸ್ ಠಾಣೆಯಲ್ಲೂ ತಲಶಾ ಇಬ್ಬರಂತೆ ಒಟ್ಟು 34 ಲಾ ಆಂಡ್ ಆರ್ಡರ್ ಪಟ್ರೋಲ್ ಎಸ್.ಐ.ಗಳ ನೇತೃತ್ವದಲ್ಲಿ ಏರ್ಪಡಿಸಲಾಗಿದೆ. ಜಿಲ್ಲೆಯ 17 ಪೆÇಲೀಸ್ ಠಾಣೆಗಳಲ್ಲೂ ಕಾನೂನುಭಂಗ ಪ್ರಕರಣಗಳು ನಡೆದಲ್ಲಿ ಅವನ್ನು ಎದುರಿಸುವ ನಿಟ್ಟಿನಲ್ಲಿ ತಲಾ ಒಂದು ಕ್ಷಿಪ್ರದಳ ನೇಮಕಗೊಂಡಿದೆ.
8 ಸಬ್ ಡಿವಿಝನ್ ಗಳಲ್ಲೂ ಡಿ.ವೈ.ಎಸ್.ಪಿ.ಗಳ ವ್ಯಾಪ್ತಿಯಲ್ಲಿ ತಲಾ ಒಂದು ಕ್ಷಿಪ್ರದಳ ಇರುವುದು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಯ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ ಮೂರು ಕ್ಷಿಪ್ರದಳಗಳನ್ನು, ರಾಜ್ಯ ಪೆÇಲೀಸ್ ಮುಖ್ಯಸ್ಥ, ಎ.ಡಿ.ಜಿ.ಪಿ.(ಶಾಂತಿ ಪಾಲನೆ) ಉತ್ತರ ವಲಯ ಎ.ಡಿ.ಪಿ., ಕಣ್ಣೂರು ವಲಯ ಡಿ.ಐ.ಜಿ. ಅವರ ವ್ಯಾಪ್ತಿಯಲ್ಲಿ ತಲಾ ಒಂದು ಕ್ಷಿಪ್ರದಳ ಜಿಲ್ಲೆಯ ವಿವಿಧೆಡೆ ಕರ್ತವ್ಯದಲ್ಲಿರುವುದು.
ಜಿಲ್ಲೆಯ 18 ಗಡಿ ಪ್ರದೇಶಗಳಲ್ಲಿ ವಾಹನ ತಪಾಸಣೆ ಸಹಿತ ವಿವಿಧ ಚಟುವಟಿಕೆಗಳಿಗಾಗಿ ಬಾರ್ಡರ್ ಸೀಲಿಂಗ್ ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿಭಂಗ ತಲೆದೋರುವ ಸಾಧ್ಯತೆಗಳಿರುವ ಸುಮಾರು 50 ಪ್ರದೇಶಗಳಲ್ಲಿ ಹೆಚ್ಚುವರಿ ಪೆÇಲೀಸ್ ಸಿಬ್ಬಂದಿಯನ್ನು ಬಳಸಿ ಪಿಕೆಟ್ ಪೆÇೀಸ್ಟ್ ಗಳನ್ನು ಏರ್ಪಡಿಸಲಾಗುವುದು.
ಜಿಲ್ಲೆಯ 1409 ಪೆÇೀಳಿಂಗ್ ಬೂತ್ ಗಳಲ್ಲಿ, ಪೆÇಲೀಸ್/ಸ್ಪೆಷ್ಯಲ್ ಪೆÇಲೀಸ್ ಅಧಿಕಾರಿಗಳ, ಸಮಸ್ಯಾತ್ಮಕ ಮತಗಟ್ಟೆಗಳಾಗಿ ಪರಿಶೀಲಿಸಲಾಗುತ್ತಿರುವ ಪ್ರದೇಶಗಳಲ್ಲಿ ಹೆಚ್ಚುವರಿ ಪೆÇಲೀಸರನ್ನು ನೇಮಿಸಲಾಗಿದೆ. ಮತಯಂತ್ರಗಳನ್ನು ದಾಸ್ತಾನು ಇರಿಸಲಾದ ಜಿಲ್ಲೆಯ 9 ಕೇಂದ್ರಗಳಲ್ಲಿ ಸಶಸ್ತ್ರ ಪೆÇಲೀಸ್ ಕಾವಲು ಏರ್ಪಡಿಸಲಾಗಿದೆ. ಚುನಾವಣೆ ಕರ್ತವ್ಯಕ್ಕಾಗಿ ಜಿಲ್ಲೆಯ ಒಳಗಡೆಯಿಂದ ಮತ್ತು ಹೊರಗಡೆಯಿಂದ ಒಟ್ಟು 2421 ಮಂದಿ ಪೆÇಲೀಸ್ ಸಿಬ್ಬಂದಿ ಈಗ ಕರ್ತವ್ಯದಲ್ಲಿದ್ದಾರೆ.
ಜಿಲ್ಲಾ ಪೆÇಲೀಸ್ ನಿಯಂತ್ರಣ ಕೊಠಡಿ ಆರಂಭ:
ಜಿಲ್ಲೆಯ ಪೆÇಲೀಸ್ ವ್ಯವಸ್ಥೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ಪೆಷ್ಯಲ್ ಬ್ರಾಂಚ್ ಡಿ.ವೈ.ಎಸ್.ಪಿ. ಹರಿಶ್ಚಂದ್ರ ನಾಯ್ಕ್ ಅವರ ವ್ಯಾಪ್ತಿಯಲ್ಲಿ ಜಿಲ್ಲಾ ಪೆÇಲೀಸ್ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ಸಾರ್ವಜನಿಕರು ಚುನಾವಣೆ ಸಂಬಮಧ ಯಾವುದೇ ಸಮಸ್ಯೆಗಳಿದ್ದಲ್ಲಿ ಅಥವಾ ಕಾನೂನುಭಂಗ ಸಮಸ್ಯೆಗಳು ತಲೆದೊರಿದಲ್ಲಿ ಕರೆಮಾಡಬಹುದು. ದೂರವಾಣಿ ಸಂಖ್ಯೆಗಳು: 04994-257371, 9497980941. ಅಥವಾ ಸ್ಥಳೀಯ ಮಟ್ಟದ ಹೊಣೆಯಿರುವ ಪೆÇಲೀಸ್ ಅಧಿಕಾರಿಯನ್ನು ಸಂಪರ್ಕಿಸಬಹುದು.