HEALTH TIPS

ಪೆಟ್ರೋಲ್ ಬೆಲೆ ಏರಿಕೆ ಐತಿಹಾಸಿಕ ಶೋಷಣೆ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

              ನವದೆಹಲಿ: ಪ್ರತಿ ಲೀಟರ್ ಪೆಟ್ರೋಲ್ ದರ ಸುಮಾರು ₹90ರಷ್ಟಾಗಿರುವುದು ಕೇಂದ್ರ ಸರ್ಕಾರವು ಜನರ ಮೇಲೆ ನಡೆಸುತ್ತಿರುವ ಐತಿಹಾಸಿಕ ಶೋಷಣೆ ಎಂದು ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

          ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಟ್ವೀಟ್ ಮಾಡಿರುವ ಅವರು, 'ಸಂಸ್ಕರಣಗೊಂಡ ಬಳಿಕ ಪ್ರತಿ ಲೀಟರ್ ಪೆಟ್ರೋಲ್‌ ಬೆಲೆ ₹30ರಷ್ಟಾಗುತ್ತದೆ. ಎಲ್ಲ ತೆರಿಗೆಗಳು, ಪೆಟ್ರೋಲ್‌ ಪಂಪ್ ಕಮಿಷನ್ ₹60ರಷ್ಟಾಗುತ್ತದೆ. ನನ್ನ ದೃಷ್ಟಿಯಲ್ಲಿ ಪೆಟ್ರೋಲ್‌ ಅನ್ನು ಗರಿಷ್ಠ ಪ್ರತಿ ಲೀಟರ್‌ಗೆ ₹40ರಂತೆ ಮಾರಾಟ ಮಾಡಬೇಕು' ಎಂದು ಉಲ್ಲೇಖಿಸಿದ್ದಾರೆ.

          ಸೋಮವಾರದ ವರೆಗೆ ಸತತ ಆರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಸೋಮವಾರ ಪೆಟ್ರೋಲ್ ಬೆಲೆಯು ದೆಹಲಿಯಲ್ಲಿ ಪ್ರತಿ ಲೀಟರ್‌ಗೆ ₹83.71 ಆಗಿತ್ತು. ಡೀಸೆಲ್ ಬೆಲೆಯು ₹73.87 ಆಗಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈಗ 2018ರ ಸೆಪ್ಟೆಂಬರ್‌ ನಂತರದ ಗರಿಷ್ಠ ಮಟ್ಟದಲ್ಲಿ ಇದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries