ಕಾಸರಗೋಡು: ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡಿರುವ ಅಂಚೆ ಮತಪತ್ರ ಲಭ್ಯತೆಗೆ ಅರ್ಹರಾಗಿರುವ ಅರ್ಜಿದಾರರು ಸಂಬಂಧಪಟ್ಟ ರಿಟನಿರ್ಂಗ್ ಅಧಿಕಾರಿಗೆ ಡಿ.12ರ ಸಂಜೆ ಗ ಗಂಟೆಗೆ ಮುಂಚಿತವಾಗಿ ತಮ್ಮ ಅರ್ಜಿಯನ್ನು ಸಲ್ಲಿಸಿರುವುದಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ತ್ರಿಸ್ತರ ಪಂಚಾಯತ್ ಚುನಾವಣೆ ಸಂಬಂಧ ಪೆÇೀಲಿಂಗ್ ಕರ್ತವ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿಗೆ ಅಂಚೆ ಮತಪತ್ರ ವಿತರಣೆ ನಡೆಸುವ ಚಟುವಟಿಕೆಗಳು ಆಯಾ ಬ್ಲೋಕ್ ರಿಟನಿರ್ಂಗ್ ಆಫೀಸರ್ ಅವರ ಮೇಲ್ನೋಟದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮುಂದುವರಿಯುತ್ತಿವೆ. ಅಂಚೆ ಮತಪತ್ರ ಸಮಪರ್ಪಕ ರೀತಿ ಲಭಿಸುವ ನಿಟ್ಟಿನಲ್ಲಿ ಮತ ಚಲಾವಣೆ ನಡೆಸಿ ಡಿ.16ರಂದು ನಡೆಯಲಿರುವ ಮತ ಎಣಿಕೆಗೆ ಮುಂಚಿತವಾಗಿ ಅಂಚೆ ಬಾಲೆಟ್, ಕೌಂಟಿಂಗ್ ಸ್ಟೇಷನ್ ನ ಸಂಬಂಧಪಟ್ಟ ರಿಟನಿರ್ಂಗ್ ಆಫೀಸರ್ ಅವರಿಗೆ ಲಭಿಸಬೇಕಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಅರ್ಹ ಸಿಬ್ಬಂದಿ ಖಚಿತತೆ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.