ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಲ್.ಡಿ.ಎಫ್ ನ್ನು ಸಮರ್ಥರಾಗಿ ಮುನ್ನಡೆಸುತ್ತಿದ್ದಾರೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಸದಸ್ಯ ಎಂ.ವಿ.ಗೋವಿಂದನ್ ಹೇಳಿದ್ದಾರೆ. ಇಂದು ಮುಖ್ಯಮಂತ್ರಿಯ ಉಪಸ್ಥಿತಿ ಅಷ್ಟೊಂದು ಪ್ರಾಮುಖ್ಯ ಅಲ್ಲ. ಆದರೆ ಅವರ ಶಕ್ತಿಯು ಮುಖ್ಯ ಎಂದು ಗೋವಿಂದನ್ ಮಾಸ್ಟರ್ ಹೇಳಿದರು.
ಚುನಾವಣಾ ಪೆÇೀಸ್ಟರ್ ಮತ್ತು ಧ್ವಜಗಳಲ್ಲಿ ಮುಖ್ಯಮಂತ್ರಿ ಅಥವಾ ನಾಯಕರ ಚಿತ್ರಗಳ ಅಗತ್ಯವಿಲ್ಲ ಎಂದು ಗೋವಿಂದನ್ ಮಾಸ್ಟರ್ ಹೇಳಿದರು. ಮುಖ್ಯಮಂತ್ರಿಗಳ ಖಾಸಗಿ ಕಾರ್ಯದರ್ಶಿ ಸಿ.ಎನ್.ರವೀಂದ್ರನ್ ಅವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಇ.ಡಿ. ಪ್ರಶ್ನಿಸಬಹುದು ಎನ್ನುವ ಮೂಲಕ ಮುಖ್ಯಮಂತ್ರಿ ವಿಚಾರಣೆಗಳನ್ನು ಸ್ವಾಗತಿಸಿದ್ದಾರೆ ಎಂದು ಗೋವಿಂದನ್ ಮಾಸ್ಟರ್ ಹೇಳಿದ್ದಾರೆ. ಇದು ಎಲ್‍ಡಿಎಫ್‍ಗೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಎಂ.ವಿ.ಗೋವಿಂದನ್ ಮಾಸ್ಟರ್ ಹೇಳಿದರು.
'ಕೆಎಸ್‍ಎಫ್‍ಇನಲ್ಲಿ ನಡೆದ ವಿಜಿಲೆನ್ಸ್ ದಾಳಿಯ ಸುತ್ತಲಿನ ವಿವಾದವು ಮುಗಿದ ಅಧ್ಯಾಯವಾಗಿದೆ. ಈ ವಿಷಯದಲ್ಲಿ ಪಕ್ಷದ ನಿಲುವನ್ನು ಹಣಕಾಸು ಸಚಿವ ಥಾಮಸ್ ಐಸಾಕ್ ಅನುಮೋದಿಸಿರುವರು. ಈಗ ಸುಪ್ರೀಂ ಕೋರ್ಟ್ ಪರಿಗಣಿಸಿರುವ ಲಾವಲಿನ್ ಪ್ರಕರಣಕ್ಕೂ ಸಿಎಂಗೆ ಯಾವುದೇ ಸಂಬಂಧವಿಲ್ಲ. ಸುಪ್ರೀಂ ಕೋರ್ಟ್ ಈಗ ಮೇಲ್ಮನವಿಯನ್ನು ಮಾತ್ರ ಪರಿಗಣಿಸುತ್ತಿದೆ ಎಂದು ಎಂ.ಎನ್.ಗೋವಿಂದನ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾ ನೀಡಿರುವ ಹೇಳಿಕೆಯೊಂದರಲ್ಲಿ ವಿವಿಧ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಪಿಣರಾಯಿ ವಿಜಯನ್ ನೇತೃತ್ವದ ಎಡ ಸರ್ಕಾರ ಸ್ವತಃ ಪಕ್ಷದ ಅವಕೃಪೆಗೆ ಒಳಗಾಗಿರುವರು. ಆದ್ದರಿಂದ ಅವರು ಎಲ್ಲಿಯೂ ಚುನಾವಣಾ ಸಂಬಂಧಿಯಾಗಿ ಕಂಡುಬರುತ್ತಿಲ್ಲ ಎಂಬ ಟೀಕೆಗೆ ಪ್ರತಿಕ್ರಿಯೆಯಾಗಿ ಗೋವಿಂದನ್ ಮಾಸ್ಟರ್ ಹೇಳಿಕೆ ನೀಡಿರುವರು.