ಮಂಜೇಶ್ವರ: ಕೇರಳದ ಪ್ರಸ್ತುತ ಆಡಳಿತ ದೇಶಕ್ಕೆ ಅವಮಾನ. ಅಧಿಕಾರ ಉಪಯೋಗಿಸಿ ಕಳ್ಳ ಸಾಗಾಟ, ಮಾದಕ ಸಾಗಾಟ, ವಂಚನೆ, ಭ್ರಷ್ಟಾಚಾರ, ಕೇರಳ ಸರಕಾರದ ಸಾಧನೆಯಾಗಿದೆ. ಎಡರಂಗದ ಮಂತ್ರಿಗಳ ಮಕ್ಕಳು, ಸಿಪಿಎಂ ಕಾರ್ಯದರ್ಶಿಯ ಪುತ್ರ ಎಲ್ಲರೂ ಜೈಲಲ್ಲಿದ್ದರೆ ಇಂದು ಎಡರರಂಗ ನಂಬರ್ ಒನ್ ಎಂದು ಬಿಜೆಪಿ ರಾಜ್ಯ ಸಹ ಪ್ರಭಾರಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಲೇವಡಿ ಮಾಡಿದರು.
ಈ ಬಾರಿಯ ತ್ರಿಸ್ತರ ಚುನಾವಣೆ ಕೇರಳದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಯ ಪ್ರಥಮ ಹೆಜ್ಜೆ. ಇದರಲ್ಲಿ ಗೆಲುವು ಬಿಜೆಪಿಗೆ ಒಲಿಯಲಿದೆ ಎಂದು ಅವರು ಹೇಳಿದರು.
ಬಿಜೆಪಿ ಮಂಜೇಶ್ವರ ಬ್ಲಾಕ್ ಅಭ್ಯರ್ಥಿಗಳ ಸಮಾವೇಶವನ್ನು ಬುಧವಾರ ಹೊಸಂಗಡಿ ಪ್ರೇರಣದಲ್ಲಿ ಉದ್ಘಾಟಿಇಸ ಅವರು ಮಾತನಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ನ್ಯಾಯವಾದಿ.ಕೆ.ಶ್ರೀಕಾಂತ್, ಮುಖಂಡರಾದ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಉಪಸ್ಥಿತರಿದ್ದರು. ಮಂಡಲ ಪ್ರ.ಕಾರ್ಯದರ್ಶಿ ಆದರ್ಶ್ ಬಿಎಂ, ಸ್ವಾಗತಿಸಿ, ಶಶಿ ಪುತ್ತಿಗೆ ವಂದಿಸಿದರು.