ತ್ರಿಶೂರ್: ಭಯೋತ್ಪಾದಕರೊಂದಿಗೆ ಸಂಬಂಧವಿದೆ ಎಂಬ ಅನುಮಾನದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ತ್ರಿಶೂರ್ ಜಿಲ್ಲೆಯ ಐದು ಮನೆಗಳ ಮೇಲೆ ದಾಳಿ ನಡೆಸಿದೆ. ಮಂಗಳವಾರ ಬೆಳಿಗ್ಗೆ ಚಾವಕ್ಕಾಡ್, ವಡಕ್ಕಕ್ಕಾಡು ಮತ್ತು ಪೂವಾತೂರ್ ಪ್ರದೇಶಗಳ ಐದು ಮನೆಗಳಿಗೆ ನಿನ್ನೆ ದಾಳಿ ನಡೆಸಿತು. ಹಳೆಯ ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಎಲ್ಲಾ ದಾಳಿಗಳು ವಿದೇಶದಿಂದ ಬಂದವರ ಮನೆಗಳಲ್ಲಿ ನಡೆದವು ಎನ್ನಲಾಗಿದೆ. ಇವರೆಲ್ಲರೂ ಐಎಸ್ ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆಂದು ಶಂಕಿಸಲಾಗಿದೆ.