ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಕಾಸರಗೋಡು ಜಿಲ್ಲೆಯಲ್ಲಿ ಸುರಕ್ಷೆ ಖಚಿತಪಡಿಸುವ ನಿಟ್ಟಿನಲ್ಲಿ ಪೋಲೀಸ್ ಪಥಸಂಚನ ನಡೆಯಿತು.
ಕುಂಬಳೆ ಮತ್ತು ಬದಿಯಡ್ಕ ಪೇಟೆಗಳಲ್ಲಿ ಈ ನಿಟ್ಟಿನಲ್ಲಿ ಪಥಸಂಚಲನ ಜರುಗಿತು. ಕಾಸರಗೋಡು ಡಿ.ವೈ.ಎಸ್.ಪಿ. ಪಿ.ಬಾಲಕೃಷ್ಣನ್ ನಾಯರ್ ಅವರ ನೇತೃತ್ವದಲ್ಲಿ ಇವು ಜರುಗಿದ್ದು, ಬದಿಯಡ್ಕದಲ್ಲಿ ಎಸ್.ಐ. ಅನೀಷ್ ಮತ್ತು ಕುಂಬಳೆಯಲ್ಲಿ ಐ.ಪಿ. ಪ್ರಮೋದ್, ಎಸ್.ಐ. ಸಂತೋಷ್ ಅವರ ಮುಂದಾಳುತ್ವದಲ್ಲಿ ಪಥಸಂಚಲನ ನಡೆದುವು.