ತಿರುವನಂತಪುರ: ತಿರುವನಂತಪುರ ನಗರಪಾಲಿಕೆಯ ಮೇಯರ್ ಆಗಿ 21ರ ಹರೆಯದ ಆರ್ಯ ರಾಜೇಂದ್ರನ್ ಆಯ್ಕೆಯಾಗಿದ್ದಾರೆ. ಮುದವನ್ಮುಕಲ್ ವಾರ್ಡ್‍ನಿಂದ ಆರ್ಯ ಗೆಲುವುಪಡೆದ ಅಭ್ಯರ್ಥಿಯಾಗಿದ್ದಾರೆ. ಯುಡಿಎಫ್ ಅಭ್ಯರ್ಥಿ ಶ್ರೀಲಾ ಅವರನ್ನು 2872 ಮತಗಳಿಂದ ಪರಾಭವಗೊಳಿಸಿ ಗೆಲುವು ದಾಖಲಿಸಿದ್ದರು. ಆರ್ಯ ವಿದ್ಯಾರ್ಥಿನಿಯಾಗಿದ್ದು, ಭಾರತದಲ್ಲೇ ಅತೀ ಕಿರಿಯ ವಯಸ್ಸಿನ ಮೊದಲ ಮೇಯರ್ ಎಂಬ ಖ್ಯಾತಿಗೊಳಗಾಗಿರುವರು.
ಆರ್ಯ ಎಸ್‍ಎಫ್‍ಎ ರಾಜ್ಯ ಸಮಿತಿ ಸದಸ್ಯೆಯಾಗಿದ್ದಾರೆ. ಅಲ್ ಸೇಂಟ್ಸ್ ಕಾಲೇಜಿನ ಬಿಎಸ್ಸಿ ಗಣಿತ ವಿದ್ಯಾರ್ಥಿನಿ. ಸಿಪಿಎಂ ಕೇಶವದೇವ್ ರಸ್ತೆ ಶಾಖಾ ಸಮಿತಿಯ ಸದಸ್ಯರಾಗಿದ್ದು ಬಾಲಸಂಗಂ ರಾಜ್ಯ ಅಧ್ಯಕ್ಷರಾಗಿದ್ದಾರೆ. ಎಲೆಕ್ಟ್ರಿಷಿಯನ್ ವೃತ್ತಿಯ ರಾಜೇಂದ್ರನ್ ಮತ್ತು ಜೀವವಿಮಾ ನಿಗಮದ ಏಜೆಂಟ್ ಶ್ರೀಲತಾ ದಂಪತಿಗಳ ಪುತ್ರಿಯಾಗಿದ್ದಾರೆ.