ನವದೆಹಲಿ: ಸಿಬಿಐ, ಇಡಿ ಮತ್ತು ರಾಷ್ಟ್ರೀಯ ತನಿಖಾ ಏಜೆನ್ಸಿಯಂತಹ ಕೇಂದ್ರೀಯ ತನಿಖಾ ಸಂಸ್ಥೆಗಳ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಮತ್ತು ರೆಕಾಡಿರ್ಂಗ್ ಸಾಧನಗಳನ್ನು ಅಳವಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ಪ್ರತಿಯೊಂದು ಪೆÇಲೀಸ್ ಠಾಣೆಗಳ ಎಲ್ಲಾ ಆಗಮನ, ನಿರ್ಗಮನ ದ್ವಾರಗಳು, ಮುಖ್ಯ ದ್ವಾರ, ಲಾಕ್ ಆಪ್ ಗಳು, ಕಾರಿಡಾರ್ ಗಳು, ರಿಸೆಫ್ ಸನ್, ಮತ್ತು ಲಾಕ್ ಆಪ್ ಕೊಠಡಿಗಳ ಹೊರಗಡೆಯ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆಯನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ನ್ಯಾಯಾಧೀಶ ಆರ್.ಎಫ್. ನಾರಿಮನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಹೇಳಿದೆ.ಮಾನವ ಹಕ್ಕುಗಳ ಉಲ್ಲಂಘನೆ ಪರಿಶೀಲನೆಗಾಗಿ ಪೆÇಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಉನ್ನತ ನ್ಯಾಯಾಲಯ 2018ರಲ್ಲಿ ಆದೇಶಿಸಿತ್ತು.
ರಾತ್ರಿಯಲ್ಲೂ ನೋಡಬಹುದಾದ ಸಾಧನಗಳನ್ನು ಸಿಸಿಟಿವಿ ವ್ಯವಸ್ಥೆಗಳು ಹೊಂದಿರಬೇಕು, ಆಡಿಯೋ, ವಿಡಿಯೋ ಫುಟೇಜ್ ಹೊಂದಿರಬೇಕು, ಕನಿಷ್ಠವೆಂದರೂ ಒಂದು ವರ್ಷದವರೆಗೂ ಮಾಹಿತಿಯನ್ನು ಸಂಗ್ರಹಿಸಿಡಬಲ್ಲಾ ಇಂತಹ ಸಿಸಿಟಿವಿ ಕ್ಯಾಮರಾಗಳನ್ನು ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಡ್ಡಾಯವಾಗಿ ಖರೀದಿಸಬೇಕು ಎಂದು ನ್ಯಾಯಪೀಠ ಹೇಳಿತು.
ಆರು ತಿಂಗಳಿಗೂ ಕಡಿಮೆ ಇಲ್ಲದ ರೀತಿಯಲ್ಲಿ ಒಂದು ನಿರ್ದಿಷ್ಠ ಸಮಯದವರೆಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು, ಮಾನವ ಹಕ್ಕುಗಳ ಉಲ್ಲಂಘನೆ ಸಂದರ್ಭದಲ್ಲಿ ಸಂತ್ರಸ್ತರು ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ ಎಂದು ನ್ಯಾಯಪೀಠ ತಿಳಿಸಿತು.