ಚುನಾವಣೆಯಲ್ಲಿ ಈ ಹಿಂದಿನ ಆಡಲಕಿತ ಪಕ್ಷ ಯುಡಿಎಫ್ ೮ ಸ್ಥಾನ ಹಾಗೂ ಪ್ರಮುಖ ಪ್ರತಿಪಕ್ಷ ಬಿಜೆಪಿ ೮ ಸ್ಥಾನಗಳನ್ನು ಸಮಬಲದಲ್ಲಿ ಗಳಿಸಿ ಸವಾಲಿಗೆ ಕಾರಣವಾಯಿತು. ಜೊತೆಗೆ ಎಲ್.ಡಿ.ಎಫ್ ಎರಡು ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿಗಳೂ ಜಯಗಳಿಸಿದ್ದರು.
ಯುಡಿಎಫ್ - ಬಿಜೆಪಿ ಸಮಬಲ ಮತ ಪಡೆದುದರಿಂದ ಇಂದು ಅಧ್ಯಕ್ಷ ಹುದ್ದೆಗೆ ಚೀಟಿ ಎತ್ತುವಿಕೆಯ ಮೂಲಕ ನಿರ್ಣಯ ಕ್ಯೆಗೊಳ್ಳಲು ತೀರ್ಮಾನಿಸಲಾಗಿತ್ತು. ಎಲ್.ಡಿ.ಎಫ್ ಮತ್ತು ಸ್ವತಂತ್ರ ಅಭ್ಯರ್ಥಿಗಳು ತಟಸ್ಥ ನಿಲುವು ವ್ಯಕ್ತಪಡಿಸಿದ್ದರಿಂದ ಚೀಟಿ ಎತ್ತುವುದು ಅನಿವಾರ್ಯವಾಯಿತು.
ಚುನಾವಣಾಧಿಕಾರಿಗಳ ಸಮಕ್ಷಮ ನಡೆದ ಪ್ರಕ್ರಿಯೆಯಲ್ಲಿ ಯುಡಿಎಫ್ ಅಭ್ಯರ್ಥಿ ಶ್ರೀಮತಿ.ಶಾಂತಾ(ವಾರ್ಡ್ 10) ಅಧ್ಯಕ್ಷೆಯಾಗಿ ಆಯ್ಕೆಯಾದರು. ಬಿಜೆಪಿಯಿಂದ 17ನೇ ವಾರ್ಡ್ ಸದಸ್ಯೆ ಸ್ವಪ್ನಾ ಹರೀಶ್ ಸ್ಪರ್ಧಿಸಿದ್ದರು.