ಮುಳ್ಳೇರಿಯ: ಮುಳಿಯಾರಿನ ಅಕ್ಕರಾ ಫೌಂಡೇಶನ್ ಸೆಂಟರ್ ಫಾರ್ ಚೈಲ್ಡ್ ಡೆವಲಪ್‍ಮೆಂಟ್ ಹಾಗೂ ಕಾಸರಗೋಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಐಸಿಡಿಎಸ್ ಕಚೇರಿ, ಐಸಿಡಿಎಸ್ ಕಾರಡ್ಕ ವಲಯದ ಸಹಯೋಗದೊಂದಿಗೆ ಅಂಗನವಾಡಿ ಶಿಕ್ಷಕಿಯರಿಗೆ ಮಕ್ಕಳ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಮೊದಲೇ ಪತ್ತೆಹಚ್ಚುವ ನಿಟ್ಟಿನಲ್ಲಿ ತರಬೇತಿ ಇತ್ತೀಚೆಗೆ ನಡೆಯಿತು.
ಅಕ್ಕರ ಫೌಂಡೇಶನ್ ಸೆಂಟರ್ ಫಾರ್ ಚೈಲ್ಡ್ ಡೆವಲಪ್ಮೆಂಟ್ ಪುನರ್ವಸತಿ ಸಿಬ್ಬಂದಿ, ಮನಃಶ್ಶಾಸ್ತ್ರಜ್ಞೆ ಡಾ.ರೀಮಾ ಬಿ.ಎಸ್, ಚೈಲ್ಡ್ ಡೆವೆಲಪ್‍ಮೆಂಟ್ ಮುಖ್ಯಸ್ಥೆ ಜಿನಿಲ್ ರಾಜ್ ಜೆ.ಆರ್., ಡಾ.ಲೀನಾ ನಾರಾಯಣನ್, ವೃತ್ತಿ ನಿರ್ವಹಣಾ ಥೆರಪಿಸ್ಟ್ ವೃಂದಾ ರಮೇಶ್,ಡಾ.ಬೀನಾ ಸೆಬಾಸ್ಟಿಯನ್, ಮತ್ತು ವಿಶೇಷ ಶಿಕ್ಷಕಿ ಶನಿಬಾ ಟಿ.ಪಿ. ತರಗತಿಗಳನ್ನು ನಡೆಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗದ ಅಧಿಕಾರಿ ಕವಿತಾ ರಾಣಿ ರಂಜಿತ್ ಸಮಾರಂಭವನ್ನು ಉದ್ಘಾಟಿಸಿದರು. ಐಸಿಡಿಎಸ್ ಯೋಜನಾಧಿಕಾರಿ ಲತಿಕಾ ಅವರ ಅಧ್ಯಕ್ಷತೆ ವಹಿಸಿದ್ದರು. ಅಕ್ಕರಾ ಫೌಂಡೇಶನ್ ಯೋಜನಾ ಪ್ರಬಂಧಕ ಯಾಸಿರ್ ಸ್ವಾಗತಿಸಿ, ಭೌತ ಚಿಕಿತ್ಸಕಿ ಫಾತಿಮಾ ಮೂಸಾ ವಂದಿಸಿದರು.