ನ್ಯೂಯಾರ್ಕ್: ಅಮೆರಿಕಾದ ಶಾಲೆಯಲ್ಲಿ ಮೊದಲ ಬಾರಿಗೆ ವಿದೇಶಿ ಭಾಷೆಯಾಗಿ ಕನ್ನಡ ಕಲಿಯಲು ಅವಕಾಶ ನೀಡಲಾಗಿದೆ.
ಉತ್ತರ ಅಮೆರಿಕಾ ನಾರ್ತ್ ಕೆರೋಲಿನಾ ರಾಜ್ಯದ ರಾಜಧಾನಿ ರೇಲಿಗ್ ಭಾಗದ ಪ್ರಸಿದ್ದ ಶಾಲೆ ವೇಕ್ ಕೌಂಟಿ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ವಿದೇಶೀ ಭಷೆಯಾಗಿ ಕಲಿಯಲು ಅವಕಾಶ ನೀಡಿದೆ.
ಅಮೆರಿಕಾದಲ್ಲಿ ಈ ಪ್ರೌಢಶಾಲೆಯಲ್ಲಿ ಕನ್ನಡವನ್ನು ಕಲಿಸುವುದು ಗ್ರೇಡ್ ಪಾಯಿಂಟ್ ರಹಿತವೆಂದು ಅನುಮೋದಿಸಿದೆ. ಶಾಲೆಯ ಈ ನಿರ್ಧಾರಕ್ಕೆ ಎಲ್ಲೆಡೆಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.