ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಪೋಲಿಂಗ್ ಸಾಮಾಗ್ರಿಗಳ ವಿತರಣೆ ಇಂದು(ಡಿ.13) ಕಾಸರಗೋಡು ಜಿಲ್ಲೆಯ 9 ಕೇಂದ್ರಗಳಲ್ಲಿ ನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ವಿತರಣೆ ಆರಂಭಗೊಂಡಿದೆ. ವಿತರಣೆ ಕೌಂಟರ್ ಗಳಲ್ಲಿ ಪ್ರಿಸೈಡಿಂಗ್ ಅಧಿಕಾರಿ, ಫಸ್ಟ್ ಪೆÇೀಲಿಂಗ್ ಅಧಿಕಾರಿಗಳಿಗೆ ಮಾತ್ರ ಪ್ರವೇಶಾತಿ ಇರುವುದು. ಕೋವಿಡ್ ಹಿನ್ನೆಲೆಯಲ್ಲಿ ಜನನಿಭಿಡತೆ ನಿಯಂತ್ರಿಸುವ ನಿಟ್ಟಿನಲ್ಲಿ ಬೆಳಗ್ಗೆ 8ರಿಂದ 9.30 ವರೆಗೆ, 9.30ರಿಂದ 11 ಗಂಟೆ ವರೆಗೆ, 11ರಿಂದ ಮಧ್ಯಾಹ್ನ 12.30 ವರೆಗೆ ಎಂಬ ಮೂರು ಹಂತಗಳಲ್ಲಿ ವಿತರಣೆ ಜರಗುತ್ತಿದೆ.
ಪ್ರಿಸೈಡಿಂಗ್ ಅಧಿಕಾರಿ, ಫಸ್ಟ್ ಪೆÇೀಲಿಂಗ್ ಅಧಿಕಾರಿಗಳನ್ನು ಹೊರತು ಪಡಿಸಿ, ಇತರ ಪೆÇೀಲಿಂಗ್ ಸಿಬ್ಬಂದಿ ಮಂಜುರು ಮಾಡಿರುವ ವಾಹನಗಳಲ್ಲಿ ಕುಳಿತುಕೊಳ್ಳಬೇಕು. ಕೌಂಟರ್ ಕರ್ತವ್ಯದ ಸಿಬ್ಬಂದಿ, ರೂಟ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳಿಗೆ ವಿತರಣ ಕೇಂದ್ರಗಳಲ್ಲಿ ಪ್ರವೇಶಾತಿ ಇರುವುದು. ಆಯಾ ರೂಟ್ ಅಧಿಕಾರಿ, ಕೌಂಟರ್ ಸಹಾಯಕರು ಪೆÇೀಲಿಂಗ್ ಸಾಮಾಗ್ರಿಗಳಿರುವ ಬ್ಯಾಗ್ ಗಳನ್ನು ವಾಹನಗಳಿಗೆ ತಲಪಿಸುವರು. ವಿದ್ಯುನ್ಮಾನ ಮತಯಂತ್ರ, ಪೇಪರ್ ಸೀಲ್, ಸೀಲುಗಳು, ಇತರ ಸಾಮಾಗ್ರಿಗಳು ಇತ್ಯಾದಿಗಳನ್ನು ಪ್ರಿಸೈಡಿಂಗ್ ಅಧಿಕಾರಿ/ಫಸ್ಟ್ ಪೆÇೀಲಿಂಗ್ ಅಧಿಕಾಗಳು ನಿಗದಿ ಪಡಿಸಿರುವ ಕೌಂಟರ್ ನಿಂದ ಪಡೆದುಕೊಳ್ಳಬೇಕು. ರಿಸರ್ವ್ ಆಗಿರುವ ಸಿಬ್ಬಂದಿಗೆ ಕೌಂಟರ್ ನಲ್ಲಿ ಪ್ರವೇಶಾತಿ ಇರುವುದು. ಅವರಿಗಾಗಿ ಪ್ರತ್ಯೇಕ ಸಿದ್ಧಪಡಿಸಿರುವ ಕಡೆ ಕುಳಿತುಕೊಳ್ಳುವ ವ್ಯವಸ್ಥೆ ಇರುವುದು.
ಪೋಲಿಂಗ್ ಸಾಮಾಗ್ರಿಗಳನ್ನು ವಿತರಿಸುವ ವೇಳೆ ಕಡ್ಡಾಯವಾಗಿ ಕೋವಿಡ್ ಸಂಹಿತೆಗಳನ್ನು ಪಾಲಿಸಬೇಕು:
ಪೋಲಿಂಗ್ ಸಾಮಾಗ್ರಿಗಳನ್ನು ವಿತರಿಸುವ ವೇಳೆ ಕಡ್ಡಾಯವಾಗಿ ಕೋವಿಡ್ ಸಂಹಿತೆಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದರು.
ಕಾಸರಗೋಡು ಬ್ಲೋಕ್ ಪಂಚಾಯತ್ ಚುನಾವಣೆ ಅಧಿಕಾರಿಯಾಗಿರುವ ಕಾಸರಗೋಡು ವಲಯ ಕಂದಾಯಾಧಿಕಾರಿ ವಿ.ಜೆ.ಷಂಸುದ್ದೀನ್, ಕಾಸರಗೋಡು ನಗರಸಭೆ ಚುನಾವಣೆ ಅಧಿಕಾರಿಯಾಗಿರುವ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶ, ಜಿಲ್ಲಾ ಉದ್ದಿಮೆ ಕೇಂದ್ರ ಪ್ರಬಂಧಕ ಸಜಿತ್ ಕುಮಾರ್ ಅವರು ಕಾಸರಗೋಡಿನಲ್ಲಿ ಮತ್ತು ಮಂಜೇಶ್ವರ ಬ್ಲೋಕ್ ಪಂಚಾಯತ್ ಚುನಾವಣೆ ಅಧಿಕಾರಿ ಎ.ಡಿ.ಸಿ.(ಜನರಲ್) ಬೆವಿನ್ ಜಾನ್ ವರ್ಗೀಸ್ ಕುಂಬಳೆಯಲ್ಲಿ ಜರುಗುತ್ತಿರುವ ಚಟುವಟಿಕೆಗಳಿಗೆ ನೇತೃತ್ವ ವಹಿಸುತ್ತಿದ್ದಾರೆ.
ಮದ್ಯ, ಹಣ ವಿತರಣೆ ಪತ್ತೆ ಮಾಡಲು 123 ಸಿಬ್ಬಂದಿಯ ನೇಮಕ:
ಚುನಾವಣೆ ಸಂಬಂಧ ಮತದಾತರಿಗೆ ಆಮಿಷ ನೀಡುವ ನಿಟ್ಟಿನಲ್ಲಿ ಕೆಲವೆಡೆ ಮದ್ಯ, ಹಣ ಅಕ್ರಮವಾಗಿ ವಿತರಣೆ ನಡೆಸುತ್ತಿರುವ ದೂರುಗಳು ಲಭಿಸಿರುವ ಹಿನ್ನೆಲೆಯಲ್ಲಿ, ಇಂಥಾ ಪ್ರಕರಣಗಳ ಪತ್ತೆಗೆ ಕಾಸರಗೋಡು ಜಿಲ್ಲೆಯ 41 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಯೊಂದರಲ್ಲಿ ತಲಾ ಮೂವರಂತೆ ಒಟ್ಟು 123 ಸಿಬ್ಬಂದಿಯನ್ನು ನೇಮಕಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಈ ಕ್ರಮದ ಅಂಗವಾಗಿ ಜಿಲ್ಲೆಯ ಕೆಲವು ಕಾಲನಿಗಳ ಸಹಿತ ಪ್ರದೇಶಗಳಲ್ಲಿ ಹಣ, ಮದ್ಯ, ಕೊಡುಗೆ ಇತ್ಯಾದಿಗಳನ್ನು ವಿತರಿಸುವ ನಿಟ್ಟಿನಲ್ಲಿ ಜನ ಗುಂಪು ಸೇರುತ್ತಿರುವುದನ್ನು ಗುರುತಿಸಿ, ವಿಶೇಷ ನಿಗಾ ಇರಿಸಲಾಗುವುದು. ಈ ಸಂಬಂಧ ಗುಪ್ತ ವರದಿಯನ್ನು ಚುನಾವಣೆಯ ನಂತರ ಚುನಾವಣೆ ಆಯೋಗಕ್ಕೆ ಸಲ್ಲಿಸಲಾಗುವುದು. ಅಪರಾಧ ಎಸಗಿರುವುದು ಖಚಿತಗೊಂಡಲ್ಲಿ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಅನರ್ಹಗೊಳಿಸುವುದು ಸಹಿತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.