ತಿರುವನಂತಪುರ: ವಿಶೇಷ ವಿಧಾನಸಭೆ ಅಧಿವೇಶನಕ್ಕೆ ಅನುಮತಿ ನಿರಾಕರಿಸಿದ ರಾಜ್ಯಪಾಲರ ಕ್ರಮಕ್ಕೆ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ ಪತ್ರಕ್ಕೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ. ವಿಶೇಷ ವಿಧಾನಸಭೆ ಅಧಿವೇಶನಕ್ಕೆ ಅನುಮತಿ ಕೇಳಿರುವುದು ಕಾನೂನುಬದ್ಧವಾಗಿರಲಿಲ್ಲ ಎಂದು ರಾಜ್ಯಪಾಲರು ಉತ್ತರಿಸಿರುವರು.
ವಿಶೇಷ ವಿಧಾನಸಭೆ ಏರ್ಪಡಿಸುವ ತುರ್ತು ಏನು ಎಂಬ ಪ್ರಶ್ನೆಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಜ್ಯಪಾಲರ ಉತ್ತರ ಪತ್ರದಲ್ಲಿ ತಿಳಿಸಲಾಗಿದೆ. ಸಿಎಂ ಪತ್ರವನ್ನು ಮಾಧ್ಯಮಗಳ ಮೂಲಕ ಬಿಡುಗಡೆ ಮಾಡಿರುವುದಕ್ಕೂ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.