ಕಾಸರಗೋಡು: ಜಸ್ಟಿಸ್ ವಿ.ಆರ್.ಕೃಷ್ಣಯ್ಯರ್ ಅವರ ಜನ್ಮದಿನಾಚರಣೆ ಸಂಬಂಧ ಸಮಾಜ ನೀತಿ ಇಲಾಖೆ, ಜಿಲ್ಲಾ ಪ್ರೊಬೇಷನ್ ಕಚೇರಿ ನೇತೃತ್ವದಲ್ಲಿ ಜರುಗಿದ ಪ್ರೊಬೇಷನ್ ಸಪ್ತಾಹ ಸಮಾರೋಪಗೊಂಡಿದೆ.
ಸಮಾರಂಭ ಅಂಗವಾಗಿ ಭಿತ್ತಿಪತ್ರಗಳ ಬಿಡುಗಡೆ- ಪ್ರದರ್ಶನ, ಸಂಸ್ಮರಣೆ, ವೆಬಿನಾರ್, ಐ.ಇ.ಸಿ.ಅಭಿಯಾನ, ಸಮಾರೋಪ ಪಾನೆಲ್ ಇತ್ಯಾದಿ ಜರುಗಿದುವು.
ಸಮಾರೋಪ ಸಮಾರಂಭವನ್ನು ಅಡೀಷನಲ್ ಜಿಲ್ಲಾ ಆಂಡ್ ಸೆಷನ್ಸ್ ನ್ಯಾಯಮೂರ್ತಿ ಆರ್.ಎಲ್.ಬೈಜು ಉದ್ಘಾಟಿಸಿದರು. ಡಿ.ಎಲ್.ಎಸ್.ಎ. ಕಾರ್ಯದರ್ಶಿ ಎಂ.ಸುಹೈಬ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ.ಎಸ್. ವಿಂಗ್ ಎ.ಎಸ್.ಪಿ. ವಿವೇಕ್ ಕುಮಾರ್, ಕೇರಳ ಕೇಂದ್ರ ವಿವಿ ಸೋಷ್ಯಲ್ ವರ್ಕ್ ವಿಭಾಗ ಮುಖ್ಯಸ್ಥ ಡಾ.ಎ.ಕೆ.ಮೋಹನ್ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.
ನಂತರ ಪ್ರೊಬೇಷನ್ ಆಫ್ ಫೆಂಡರ್ಸ್ ಎಂಬ ವಿಷಯದಲ್ಲಿ ಪಾನೆಲ್ ಸಂವಾದ ಜರುಗಿತು. ವಯನಾಡ್ ಜಿಲ್ಲಾ ಪೆÇ್ರಬೇಷನ್ ಅಧಿಕಾರಿ ಅಶ್ರಫ್ ಕಾವಿಲ್, ತಿರುವನಂತಪುರಂ ಕಾನೂನು ಕಾಲೇಜಿನ ಸಹಾಯಕ ಪ್ರಾಚಾರ್ಯೆ ಡಾ.ಮೀನಾಕುಮಾರಿ, ಕಾಸರಗೊಡು ಟೆಪ್ಯೂಟಿ ಡೈರೆಕ್ಟರ್ ಆಫ್ ಪ್ರಾಸಿಕ್ಯೂಷನ್ ಇ.ವಿ.ಅಬ್ದುಲ್ ರಷೀದ್, ಕೆಲ್ಸಾ ಸದಸ್ಯ ಡಾ.ಸುಹೃತ್ ಕುಮಾರ್, ಕಣ್ಣೂರು ಕೇಂದ್ರೀಯ ಕಾರಾಗೃಹ ವೆಲ್ಫೇರ್ ಆಫೀಸರ್ ಕೆ.ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಕಾಸರಗೋಡು ಜಿಲ್ಲಾ ಪೆÇ್ರಬೇಷನ್ ಅಧಿಕಾರಿ ಪಿ.ಬಿಜು ಸ್ವಾಗತಿಸಿದರು. ಪೆÇ್ರಬೇಷನ್ ಸಹಾಯಕ ಬಿ.ಸಲಾವುದ್ದೀನ್ ವಂದಿಸಿದರು.