ಪತ್ತನಂತಿಟ್ಟು: ಸಂಪರ್ಕಕ್ಕೆ ಬಂದ ಮೂವರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಶಬರಿಮಲೆ ಮೆಲ್ಶಾಂತಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಅವರು ಸನ್ನಿಧಿಯಲ್ಲಿ ಪ್ರತ್ಯೇಕವಾಗಿ ಉಳಿಯಲಿದ್ದಾರೆ. ಮೆಲ್ಶಾಂತಿ ಸೇರಿದಂತೆ ಏಳು ಮಂದಿ ನಿರೀಕ್ಷಣೆಯಲ್ಲಿರುವರು.
ಸನ್ನಿಧಿ ವಲಯವನ್ನು ಪ್ರತ್ಯೇಕ ಕಂಟೈನ್ಮೆಂಟ್ ವಲಯವನ್ನಾಗಿ ಮಾಡಬೇಕೆಂದು ವೈದ್ಯಕೀಯ ಅಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡಿರುವರು. ಆದರೆ ಕ್ಷೇತ್ರದ ದೈನಂದಿನ ಆರಾಧನೆಗೆ ಅಡ್ಡಿಯಾಗುವುದಿಲ್ಲ ಎಮದು ತಿಳಿದುಬಂದಿದೆ. ಮುಂದಿನ ಶಬರಿಮಲೆ ಯಾತ್ರೆಯ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ದೇವಸ್ವಂ ಮಂಡಳಿ ತಿಳಿಸಿದೆ.
ಮಂಗಳವಾರ ನಡೆದ ಕ್ಷಿಪ್ರ ಪರೀಕ್ಷೆಯ ವೇಳೆ ಸನ್ನಿಧಿ ಪರಿಸರದಲ್ಲಿ ವೈರಸ್ ಇರುವುದು ಪತ್ತೆಯಾಗಿದೆ. ಅಂತಿಮ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ದೇವಸ್ವಂ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.