ಕಾಸರಗೋಡು: ಸಿಪಿಎಂ ಕಾರ್ಯಕರ್ತರೊಬ್ಬರು ನೀಡಿದ ಲಾಟರಿ ಟಿಕೆಟ್‍ನಲ್ಲಿ ಯುಡಿಎಫ್ ಅಭ್ಯರ್ಥಿಗೆ ಲಾಟರಿಗೆ ಬಹುಮಾನ ಒಲಿದು ಬಂದಿದ್ದು ಆಶ್ಚರ್ಯಕ್ಕೆಡೆಯಾಗಿ ಕುತೂಹಲ ಮೂಡಿಸಿದೆ. ಯುಡಿಎಫ್ ಅಭ್ಯರ್ಥಿ ರಾಜೇಶ್ ತಂಬಾನ್ ಅವರು ರಾಜ್ಯ ಸರ್ಕಾರದ ವಿನ್-ವಿನ್ ಲಾಟರಿ ಬಹುಮಾನವನ್ನು ಗೆದ್ದಿದ್ದಾರೆ. ಪುಂಗಮ್ ಚಾಲ್‍ನ ಸಿಪಿಎಂ ಕಾರ್ಯಕರ್ತ ಅಶೋಕ್ ಅವರಿಂದ ರಾಜೇಶ್ ಅವರು ಖರೀದಿಸಿದ ಲಾಟರಿಗೆ ಬಹುಮಾನ ಒಲಿದು ಬಂದಿದೆ.
ಕಳೆದ ಸೋಮವಾರ ಡ್ರಾ ನಡೆದಿದ್ದ ರಾಜೇಶ್ ತಂಬ್ನ್ ಖರೀಸಿದ್ದ ಲಾಟರಿಗೆ 5,000 ರೂ. ಬಹುಮಾನ ಗಳಿಸಿದರು. ಅಶೋಕ್ ಚುನಾವಣಾ ಪ್ರಚಾರದ ಸಮಯದಲ್ಲಿ ರಾಜೇಶ್ ಅವರಿಗೆ ಟಿಕೆಟ್ ಮಾರಾಟ ಮಾಡಿದ್ದರು. ಅಶೋಕ್ ಬಳಿ ಮತ ಯಾಚಿಸಿ ಬಂದ ರಾಜೇಶ್ ಅವರಲ್ಲಿ ತಮಾಷೆಗಾಗಿ "ಕೇವಲ ಮತವನ್ನು ಮಾತ್ರ ಕೇಳಬೇಡಿ", ಎಂದು ಹೇಳಿ ಸ್ನೇಹಿತನೂ ಆಗಿರುವ ರಾಜೇಶ್ ಗೆ ಲಾಟರಿ ಟಿಕೆಟ್ ಮಾರುತ್ತಿದ್ದರು.
ಚುನಾವಣಾ ಪ್ರಚಾರ ಮುಗಿಸಿ ರಾತ್ರಿ ಮನೆಗೆ ಮರಳಿದ್ದ ರಾಜೇಶ್ ಗೆ ಅಶೋಕನ್ ಅವರೇ ದೂರವಾಣಿ ಮೂಲಕ ಲಾಟರಿ ಗೆದ್ದಿರುವ ಬಗ್ಗೆ ಮಾಹಿತಿ ನೀಡಿದರು. ಡ್ರಾದಿಂದ ಸಂಗ್ರಹಿಸಿದ ಹಣವನ್ನು ಚುನಾವಣಾ ಪ್ರಚಾರಕ್ಕೆ ಬಳಸಲಾಗುವುದು ಎಂಬುದು ರಾಜೇಶ್ ಅವರು ಅಭಿಪ್ರಾಯ ಪ್ರಕಟಿಸಿದ್ದಾರೆ.
ರಾಜೇಶ್ ಯುಡಿಎಫ್ ಅಭ್ಯರ್ಥಿಯಾಗಿದ್ದು, ಪರಪ್ಪ ಬ್ಲಾಕ್ ಪಂಚಾಯಿತಿಗಾಗಿ ಎಳೇರಿ ವಿಭಾಗದಿಂದ ಸ್ಪರ್ಧಿಸುತ್ತಿದ್ದಾರೆ. ಎಡ ಪಕ್ಷದ ಕೋಟೆಯಾದ ಪರಪ್ಪ ಬ್ಲಾಕ್ ಪಂಚಾಯತ್‍ನಲ್ಲಿ ಎಳೇರಿ ವಿಭಾಗವನ್ನು ಗೆಲ್ಲುವ ವಿಶ್ವಾಸದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಯೂ ಆಗಿರುವ ರಾಜೇಶ್ ತಂಬಾನ್ ಅವರನ್ನು ಕಣಕ್ಕಿಳಿಸಲಾಗಿದೆ.