ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಕಾಸರಗೋಡು ಸರಕಾರಿ ಕಾಲೇಜಿಗೆ ಬುಧವಾರ ಭೇಟಿ ನೀಡಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಲ್ಲಿ ಸಿದ್ಧಪಡಿಸಲಾಗುತ್ತಿರುವ ಸ್ಟ್ರಾಂಗ್ ರೂಂನ ಸಿದ್ಧತಗೆಳ ಅವಲೋಕನ ನಡೆಸಿ, ಸಿಬ್ಬಂದಿಗೆ ಸಲಹೆ, ಸೂಚನೆಗಳನ್ನು ನೀಡಿದರು.
ಮತದಾನದ ನಂತರ ಕಾಸರಗೋಡು ಬ್ಲೋಕ್ ನ ವ್ಯಾಪ್ತಿಯ ಗ್ರಾಮ ಪಂಚಾಯತ್ ಮತ್ತು ನಗರಸಭೆಯ ವಿದ್ಯುನ್ಮಾನ ಮತಯಂತ್ರಗಳನ್ನು ತೀವ್ರ ಜಾಗರೂಕತೆಗಳ ಸಹಿತ ಇಲ್ಲಿ ದಾಸ್ತಾನು ಇರಿಸಲಾಗುವುದು. ಈ ಗ್ರಾಮ ಪಂಚಾಯತ್ ಗಳ , ನಗರಸಭೆಯ ಪೆÇೀಲಿಂಗ್ ಸಾಮಾಗ್ರಿಗಳ ವಿತರಣೆ, ಸ್ವೀಕೃತಿ ಕೇಂದ್ರಗಳು ಈ ಕಾಲೇಜಿನಲ್ಲೇ ಸಜ್ಜುಗೊಳ್ಳಲಿವೆ. ಮತಗಣನೆಯೂ ಇಲ್ಲೇ ಜರುಗುವುದು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಕಾಸರಗೋಡು ಬ್ಲೋಕ್ ಪಂಚಾಯತ್ ರಿಟನಿರ್ಂಗ್ ಆಫೀಸರ್ ವಿ.ಜೆ.ಷಂಸುದ್ದೀನ್, ಸಹಾಯಕ ರಿಟನಿರ್ಂಗ್ ಆಫೀಸರ್ ಅನುಪಂ ಜಿಲ್ಲಾಧಿಕಾರಿಯ ಜೊತೆಗಿದ್ದರು.