ಕಾಸರಗೋಡು: ಮತದಾತರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಳಸಲಾಗುವ ಡಮ್ಮಿ ಬಾಲೆಟ್ ಯೂನಿಟ್ ಗಳಲ್ಲಿ ಅಭ್ಯರ್ಥಿಗಳ ಹೆಸರು, ಚಿಹ್ನೆ ಇತ್ಯಾದಿ ಬಳಕೆಯನ್ನು ನಿಷೇಧ ಮಾಡಲಾಗಿದೆ. ನಿಜಸ್ಥಿತಿಯ ಬಾಲೆಟ್ ಯೂನಿಟ್ ಗಳ ಅಧಾರ್ಂಶ ಮಾತ್ರ ವಿರುವ ಮರದಿಂದ ಯಾ ಪ್ಲೈವುಡ್ ನಿಂದ ನಿರ್ಮಿಸಿರುವ ಡಮ್ಮಿ ಬಾಲೆಟ್ ಯೂನಿಟ್ ಗಳನ್ನು ಅಗತ್ಯವಿದ್ದಲ್ಲಿ ಅಭ್ಯರ್ಥಿಗಳು ಬಳಸಬಹುದು. ಆದರೆ ನಿಜರೂಪದ ಬಾಲೆಟ್ ಯೂನಿಟ್ ಗಳನ್ನೇ ಹೋಲುವ ಡಮ್ಮಿ ಯೂನಿಟ್ ಗಳನ್ನು ಬಳಸುವಂತಿಲ್ಲ.
ಸಾರ್ವಜನಿಕ ಸಭೆ, ಮೆರವಣಿಗೆ : ಸಮಯ ಅವಧಿ ಮರೆಯಕೂಡದು
ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಪ್ರಚಾರ ಅಂಗವಾಗಿ ಸಾರ್ವಜನಿಕ ಸಭೆ, ಮೆರವಣಿಗೆ ಇತ್ಯಾದಿ ನಡೆಸುವ ವೇಳೆ ಸಮಯದ ಅವಧಿಯನ್ನು ಮರೆಯಕೂಡದು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಇವುಗಳನ್ನು ನಡೆಸಕೂಡದು. ಮತ ಎಣಿಕೆ ಕೊನೆಗೊಳ್ಳುವ ತನಕದ 48 ತಾಸುಗಳ ಮುನ್ನ ವರೆಗಿನ, ಮತದಾನ ಕೊನೆಗೊಳ್ಳುವ ವರೆಗಿನ ಸಮಯದಲ್ಲಿ ಸಾರ್ವಜನಿಕ ಸಭೆ, ಜಾಥಾ ನಡೆಸಕೂಡದು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದರು.