'
ತಿರುವನಂತಪುರ: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು 'ಪಿಆರ್‌ಡಿ ಲೈವ್' ಮೊಬೈಲ್ ಆ್ಯಪ್ ಮೂಲಕ ತಿಳಿಯಬಹುದಾಗಿದೆ.ಎಣಿಕೆಯ ಪ್ರಾರಂಭದಿಂದ ಎಲ್ಲಾ ಹಂತಗಳನ್ನೂ ಅಪ್ಲಿಕೇಶನ್‌ನ ಮೂಲಕ ನೈಜ ಸಮಯದಲ್ಲಿ ತಿಳಿಯಬಹುದಾಗಿದೆ. ವಾರ್ಡ್ ಮಟ್ಟದಿಂದ ರಾಜ್ಯ ಮಟ್ಟದ ವರೆಗಿನ ಮತ ಎಣಿಕೆಯ ಪ್ರಗತಿಯನ್ನು ಯಾವುದೇ ಅಡೆತಡೆಯಿಲ್ಲದೆ ತಿಳಿಯಲು ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ, ಜಿಲ್ಲೆ, ನಗರಸಭೆ, ಬ್ಲಾಕ್ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಘಳಿಗೆ ಘಳಿಗೆಗಳ ಮತ ಎಣಿಕಾ ವಿವರಗಳು
ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಬಹುದು. ಆಪ್ ನ ಫಲಿತಾಂಶಗಳ ಬಿತ್ತರಣೆಯಲ್ಲಿ ಸಮಸ್ಯೆಗಳನ್ನು ತಡೆಯಲು ಆಟೋ ಸ್ಕೇಲಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.
ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪಿಆರ್‌ಡಿ ಲೈವ್ ಆ್ಯಪ್ ಮೂಲಕ 25 ಲಕ್ಷ ಜನರು ವೀಕ್ಷಿಸಿದ್ದರು.
LINK