ತಿರುವನಂತಪುರ: ಮುಖ್ಯಮಂತ್ರಿಗಳ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿಎಂ ರವೀಂದ್ರನ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ರವೀಂದ್ರನ್ ತಿರುವನಂತಪುರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ರವೀಂದ್ರನ್ ಒಳರೋಗಿಗಳ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರ ಜಾರಿ ನಿರ್ದೇಶನಾಲಯಕ್ಕೆ ಹಾಜರಾಗುವಂತೆ ರವೀಂದ್ರನ್ ಅವರಿಗೆ ನೋಟಿಸ್ ನೀಡಿರುವ ಬೆನ್ನಿಗೇ ಮತ್ತೆ ಅವರು ಆಸ್ಪತ್ರೆಗೆ ದಾಖಲಾಗಿದ್ದು ಇಡಿಯ ನೋಟೀಸಿನ ಹಿನ್ನೆಲೆಯಲ್ಲಿ ಇದು ಮೂರನೇ ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದಕ್ಕೂ ಮೊದಲು ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ರವೀಂದ್ರನ್ ಅವರಿಗೆ ನವೆಂಬರ್ 6 ರಂದು ಇಡಿ ನೋಟಿಸ್ ನೀಡಿತ್ತು. ಇದೇ ವೇಳೆ ಅವರಿಗೆ ಕೋವಿಡ್ ದೃಢಪಡಿಸಲಾಯಿತು. ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವಂತೆ ಎರಡನೇ ಬಾರಿ ರವೀಂದ್ರನ್ ಅವರಿಗೆ ಇಡಿ ನೋಟಿಸ್ ನೀಡಿತು. ಆದರೆ ಕೋವಿಡ್ ನಂತರದ ಅನಾರೋಗ್ಯದ ಕಾರಣ ಅವರು ವಿಚಾರಣೆಯಿಂದ ತಪ್ಪಿಸಿಕೊಂಡರು. ಇದೀಗ ಮೂರನೇ ಬಾರಿಯೂ ವಿಚಾರಣೆಯ ನೋಟೀಸ್ ತಲಪುತ್ತಿರುವಂತೆ ಆಸ್ಪತ್ರೆಗೆ ದಾಖಲಾಗಿದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ. ಕಳೆದ ಬಾರಿ ಸಿಪಿಎಂ ಪಕ್ಷ ಸ್ವತಃ ರವೀಂದ್ರನ್ ಅವರು ವಿಚಾರಣೆಗೆ ಹಾಜರಾಗದ ಬಗ್ಗೆ ವಿರೋಧ ವ್ಯಕ್ತಪಡಿಸಿತ್ತು.