ನವದೆಹಲಿ: ಮುಂದಿನ ಫೆಬ್ರವರಿಯಲ್ಲಿ ಇಂಗ್ಲೆಂಡ್ ಭಾರತ ಪ್ರವಾಸ ಕೈಗೊಳ್ಳಲಿದ್ದು ಸುದೀರ್ಘ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.
ಫೆಬ್ರವರಿ 5ರಿಂದ ಟೆಸ್ಟ್ ಸರಣಿ ಮೂಲಕ ಭಾರತ ಇಂಗ್ಲೆಂಡ್ ವಿರುದ್ಧ ಸುದೀರ್ಘ ಸರಣಿಗೆ ಆರಂಭಗೊಳ್ಳಲಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳು ಚೆನ್ನೈ ನಲ್ಲಿ ನಡೆಯಲಿದ್ದು ಇನ್ನೆರೆಡು ಪಂದ್ಯಗಳು ಹೊಸದಾಗಿ ನಿರ್ಮಾಣವಾಗಿರುವ ಅಹಮದಾಬಾದ್ ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಟೆಸ್ಟ್ ಸರಣಿ ಬಳಿಕ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ಟೆಸ್ಟ್ ಸರಣಿ ವೇಳಾಪಟ್ಟಿ:
ಮೊದಲ ಟೆಸ್ಟ್ ಫೆ. 5 ರಿಂದ 9, ಚೆನ್ನೈ
ಎರಡನೇ ಟೆಸ್ಟ್ ಫೆ. 13 ರಿಂದ 17, ಚೆನ್ನೈ
ಮೂರನೇ ಟೆಸ್ಟ್ ಫೆ. 24 ರಿಂದ 28, ಅಹಮದಾಬಾದ್
ನಾಲ್ಕನೇ ಟೆಸ್ಟ್ ಮಾರ್ಚ್ 4 ರಿಂದ 8, ಅಹಮದಾಬಾದ್
ಟಿ20 ಸರಣಿ:
ಮೊದಲ ಟಿ20 ಪಂದ್ಯ, ಮಾರ್ಚ್ 12, ಅಹಮದಾಬಾದ್
ಎರಡನೇ ಟಿ20 ಪಂದ್ಯ, ಮಾರ್ಚ್ 14, ಅಹಮದಾಬಾದ್
ಮೂರನೇ ಟಿ20 ಪಂದ್ಯ, ಮಾರ್ಚ್ 16, ಅಹಮದಾಬಾದ್
ನಾಲ್ಕನೇ ಟಿ20 ಪಂದ್ಯ, ಮಾರ್ಚ್ 18, ಅಹಮದಾಬಾದ್
ಐದನೇ ಟಿ20 ಪಂದ್ಯ, ಮಾರ್ಚ್ 20, ಅಹಮದಾಬಾದ್
ಏಕದಿನ ಸರಣಿ:
ಮೊದಲ ಏಕದಿನ ಪಂದ್ಯ, ಮಾರ್ಚ್ 23, ಪುಣೆ
ಎರಡನೇ ಏಕದಿನ ಪಂದ್ಯ, ಮಾರ್ಚ್ 26, ಪುಣೆ
ಮೂರನೇ ಏಕದಿನ ಪಂದ್ಯ, ಮಾರ್ಚ್ 28, ಪುಣೆ