ತಿರುವನಂತಪುರ: ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ಇದರ ವಿರುದ್ಧ ಐಎಂಎ ನಡೆಸಿದ ಮುಷ್ಕರವನ್ನು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಕಿಸಿದ್ದಾರೆ. ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬಹುದು ಮತ್ತು ಸಾಕಷ್ಟು ತರಬೇತಿ ಪಡೆಯಬೇಕು ಎಂದು ಆರೋಗ್ಯ ಸಚಿವೆ ಹೇಳಿದರು.
ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಈ ಬಗ್ಗೆ ನನ್ನೆ ಮಾತನಾಡಿ ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲು ಕೇಂದ್ರ ಸರ್ಕಾರ ನೀಡಿರುವ ಅನುಮತಿಯನ್ನು ಬೆಂಬಲವಿದೆ ಎಂದಿರುವರು. ಆದರೆ ಪೂರ್ವ ಸಿದ್ದತೆಗಳಿಲ್ಲದೆ ಮಾಡಬಾರದು ಎಂದು ಸಚಿವರು ಹೇಳಿದರು. ಮುಷ್ಕರವನ್ನು ಸರ್ಕಾರ ವಿರೋಧಿಸುತ್ತಿದೆ ಮತ್ತು ಮುಷ್ಕರದಿಂದಾಗಿ ಒಂದೇ ಒಂದು ಜೀವ ಕಳೆದುಕೊಳ್ಳಬಾರದು ಎಂದರು.
ಆಯುಷ್ ವೈದ್ಯರಿಗೆ ವಿವಿಧ ವಿಭಾಗಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಎರಡು ಸ್ನಾತಕೋತ್ತರ ಕೋರ್ಸ್‍ಗಳನ್ನು ಜಾರಿಗೆ ತರಲು ಕೇಂದ್ರ ಆಯುಷ್ ಸಚಿವಾಲಯ ಯೋಜಿಸಿದೆ. ಶಸ್ತ್ರಚಿಕಿತ್ಸೆಗಳಲ್ಲಿ ತರಬೇತಿ ನೀಡಲು ಪ್ರಸ್ತುತ ಅರ್ಹ ವ್ಯಕ್ತಿಗಳು ಲಭ್ಯವಿಲ್ಲದ ಕಾರಣ ಆಧುನಿಕ ಔಷಧಿ ಶಾಸ್ತ್ರ ವೈದ್ಯರು ತರಬೇತಿ ನೀಡಬೇಕು ಎಂದು ಆಯುಷ್ ಸಚಿವಾಲಯ ಹೇಳಿದೆ. ಆದರೆ ಆಧುನಿಕ ಔಷಧ ವೃತ್ತಿಪರರು ಹೇಳುವಂತೆ ಏವಿಯಲ್ ಚಿಕಿತ್ಸೆಯು ದೇಶದ ಆರೋಗ್ಯ ಕ್ಷೇತ್ರಕ್ಕೆ ಹಾನಿಕಾರಕವಾಗಿದೆ ಮತ್ತು ವಿಭಿನ್ನ ಚಿಕಿತ್ಸೆಗಳ ಮಿಶ್ರಣವನ್ನು ಅನುಮತಿಸುವುದಿಲ್ಲ ಎಂದಿದೆ. ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯ ಭಾಗವಾಗಿ ದೇಶಾದ್ಯಂತ ವೈದ್ಯರು ಶುಕ್ರವಾರ ಒಪಿಯನ್ನು ಬಹಿಷ್ಕರಿಸಿದ್ದಾರೆ. ಮುಷ್ಕರದ ಬಳಿಕ ಸಚಿವೆ ಹೇಳಿಕೆ ನೀಡಿದ್ದಾರೆ.