HEALTH TIPS

ಕೋವಿಡ್ ಹೆಚ್ಚಳ ಸಾಧ್ಯತೆ-ಮತ್ತೆ ಸಕ್ರಿಯಗೊಂಡ ಇ-ಸಂಜೀವನಿ- ಜಾಗರೂಕರಾಗಿರಲು ಸೂಚನೆ

                    

        ತಿರುವನಂತಪುರ: ಸ್ಥಳೀಯ ಸಂಸ್ಥೆಯ ಚುನಾವಣೆಗಳು ಮುಗಿಯುವುದರೊಂದಿಗೆ, ಕೋವಿಡ್ ಸೋಂಕಿನ ಮತ್ತೊಂದು ಹಂತದ ಹರಡುವಿಕೆ ಏಕಾಏಕಿ ಸಂಭವಿಸಬಹುದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ. ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಈ ಬಗ್ಗೆ ಮಾಹಿತಿ ನೀಡಿ, ಪತ್ರಿಕಾ ಪ್ರಕಟಣೆ ಹೊರಡಿಸಿರುವರು. 

        ಕೋವಿಡ್‍ನ ಸನ್ನಿವೇಶದಲ್ಲಿ, ವಿಶ್ವದ ಅನೇಕ ಭಾಗಗಳಲ್ಲಿ ಈಗಾಗಲೇ ನಡೆದ ಚುನಾವಣೆಗಳಲ್ಲಿ ಸೋಂಕು ಹರಡುವಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಆದ್ದರಿಂದ ಕೇರಳಕ್ಕೂ ಜಾಗರೂಕರಾಗಿರಲು ಸೂಚಿಸಲಾಗಿದೆ.

        ಮಾಸ್ಕ್ ಧರಿಸಲು ಮತ್ತು  ಕೈಗಳನ್ನು ಆಗಾಗ್ಗೆ ತೊಳೆಯಲು ಅಥವಾ ಸ್ಯಾನಿಟೈಜನೊರ್ಂದಿಗೆ ಸ್ವಚ್ಚಗೊಳಿಸಲು ಮತ್ತು ಸಾಮಾಜಿಕ ಅಂತರ  ಕಾಪಾಡಿಕೊಳ್ಳಲು ಸೂಚಿಸಲಾಗಿದೆ.

         ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹಾಜರಾಗಿ ಸಂವಹನ ನಡೆಸಿದವರು ಮುಂಬರುವ ವಾರಗಳಲ್ಲಿ  ಗಮನ ಹರಿಸಬೇಕಾಗಿದೆ. ಜ್ವರ, ನೋಯುತ್ತಿರುವ ಗಂಟಲು ಮತ್ತು ಶೀತದಂತಹ ಯಾವುದೇ ರೋಗಲಕ್ಷಣಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ಅಂತವರು  ಇ-ಸಂಜೀವನಿ ಅಥವಾ ನಿರ್ದೇಶನಗಳಿಗೆ 1056 ರ ಸೇವೆಗಳನ್ನು ಪಡೆಯಬೇಕು ಎಂದು ಹೇಳಲಾಗಿದೆ.

        ಆರೋಗ್ಯ ಕಾರ್ಯಕರ್ತರ ಸೂಚನೆಯಂತೆ ಕೋವಿಡ್ ಪರೀಕ್ಷೆ ನಡೆಸುವ ಮೂಲಕ ಪ್ರತಿಯೊಬ್ಬರೂ ತಮ್ಮಿಂದ ಇತರರಿಗೆ ರೋಗ ಹರಡದಂತೆ ಎಚ್ಚರ ವಹಿಸಬೇಕು ಎಂದು ಸಚಿವೆ ಹೇಳಿರುವರು.

        ಇತರ ಕಾಯಿಲೆಗಳ ಜೊತೆಗೆ, ಕ್ವಾರಂಟೈನ್ ನಲ್ಲಿರುವವರು ಮತ್ತು ಕೋವಿಡ್ ಶಂಕಿತರು ಚಿಕಿತ್ಸೆ ಮತ್ತು ಇತರ ಶಿಫಾರಸುಗಳಿಗಾಗಿ ಇ-ಸಂಜೀವಿಯನ್ನು ಅನುಸರಿಸಬೇಕು. ವಿವಿಧ ವಿಶೇಷ ವಿಭಾಗಗಳ ಜೊತೆಗೆ, ಕೋವಿಡ್ ಚಿಕಿತ್ಸಾಲಯಗಳು ಇ-ಸಂಜೀವನಿಗಳಲ್ಲಿಯೂ ಲಭ್ಯವಿದೆ.

        ಆರೋಗ್ಯ ಇಲಾಖೆಯ ಪರಿಣಿತ ವೈದ್ಯರ ನೇತೃತ್ವದಲ್ಲಿ ವಿಶೇಷ ಒಪಿಗಳನ್ನು ವಿವಿಧ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ. ಮನೋವೈದ್ಯಕೀಯ, ಪೀಡಿಯಾಟ್ರಿಕ್ಸ್, ಕಾರ್ಡಿಯಾಲಜಿ ಮತ್ತು ಸ್ತ್ರೀರೋಗ ಶಾಸ್ತ್ರದಂತಹ ವಿಶೇಷ ಒಪಿ ಸೇವೆಗಳನ್ನು ಒದಗಿಸಲಾಗಿದೆ. ಕೇರಳದ ಪ್ರಖ್ಯಾತ ಸಾರ್ವಜನಿಕ ವಲಯದ ಆರೋಗ್ಯ ಸಂಸ್ಥೆಗಳಾದ ಎಂಸಿಸಿ ತಲಶೇರಿ, ಆರ್‍ಸಿಸಿ ತಿರುವನಂತಪುರ, ಕೊಚ್ಚಿನ್ ಕ್ಯಾನ್ಸರ್ ಸೆಂಟರ್, ಇಮ್ಹಾನ್ಸ್ ಕೋಝಿಕೋಡ್ ಮತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ತಿರುವನಂತಪುರ ಸಹ ಇ-ಸಂಜೀವನಿ ಮೂಲಕ ಒಪಿಸಿಗಳನ್ನು ಪ್ರಾರಂಭಿಸಿವೆ.

        ಇ-ಸಂಜೀವನಿ ಮೂಲಕ ಈವರೆಗೆ 63,766 ಸಮಾಲೋಚನೆಗಳು ಪೂರ್ಣಗೊಂಡಿವೆ. ಪರೀಕ್ಷೆಗೆ ಸರಾಸರಿ  6 ನಿಮಿಷ 49 ಸೆಕೆಂಡುಗಳು ಬೇಕಾಗಿದೆ. ಇ-ಸಂಜೀವನಿ ಯಲ್ಲಿನ ಹೊಸ ವ್ಯವಸ್ಥೆಯು ಚಿಕಿತ್ಸೆ-ಸಮಾಲೋಚನೆಗಳಿಗೆ ಕಾಯುವ ಸಮಯವನ್ನು 4 ನಿಮಿಷ 33 ಸೆಕೆಂಡ್‍ಗಳಿಗೆ ಇಳಿಸಿದೆ. ತಾಂತ್ರಿಕ ಪರಿಪೂರ್ಣತೆ ಮತ್ತು ಕ್ರಿಯಾತ್ಮಕ ಶ್ರೇಷ್ಠತೆಯು ಇ-ಸಂಜೀವನಿ ಯಲ್ಲಿ ಭಾರಿ ಬದಲಾವಣೆಗಳಿಗೆ ಕಾರಣವಾಗಿದೆ. 

     ಕೋವಿಡ್ ಸಮಯದಲ್ಲಿ, ಯಾವುದೇ ಸೋಂಕಿನ ಅಪಾಯವಿಲ್ಲದೆ ಆಸ್ಪತ್ರೆಗಳಿಗೆ ಹೋಗಿ ಇ-ಸಂಜೀವನಿ ಮೂಲಕ ಮನೆಯಲ್ಲಿ ಚಿಕಿತ್ಸೆ ಪಡೆಯುವುದು ತುಂಬಾ ಸುಲಭ.

ವೀಡಿಯೊ ಕಾನ್ಫರೆನ್ಸ್ ಮೂಲಕ ನೀವು ನೇರವಾಗಿ ನಿಮ್ಮ ವೈದ್ಯರೊಂದಿಗೆ ರೋಗದ ಬಗ್ಗೆ ಮಾತನಾಡಬಹುದು. ಆನ್‍ಲೈನ್ ಸಮಾಲೋಚನೆಯ ನಂತರ ಪ್ರಿಸ್ಕ್ರಿಪ್ಷನ್ ಅನ್ನು ಡೌನ್‍ಲೋಡ್ ಮಾಡಿ ಸೂಚಿಸಲ್ಪಟ್ಟ ಔಷಧಿಗಳನ್ನು ಖರೀದಿಸಬಹುದು. ಪರೀಕ್ಷೆಗಳನ್ನು ಸಹ ಮಾಡಬಹುದು. ಹೆಚ್ಚಿನ ಮಾಹಿತಿಗೆ  ದಿಶಾ 1056 ಗೆ ಕರೆ ಮಾಡಬಹುದು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries