ಪೆರ್ಲ:ಕೇರಳ ರಾಜ್ಯ ವಿದ್ಯುತ್ ಮಂಡಳಿ ಪೆರ್ಲ ಸೆಕ್ಷನ್ ಕಚೇರಿಯ ಎಲ್ಲಾ ಸಿಬಂದಿಗಳ ಶ್ಲಾಘನೀಯ, ಗ್ರಾಹಕ ಸ್ನೇಹಿ ಸೇವೆಯನ್ನು ಗುರುತಿಸುವ ಸರಳ ಕಾರ್ಯಕ್ರಮ ಪೆರ್ಲ ಸೆಕ್ಷನ್ ಕಚೇರಿಯಲ್ಲಿ ನಡೆಯಿತು.
ಕೋವಿಡ್ ಇತಿಮಿತಿ ಹಿನ್ನೆಲೆಯಲ್ಲಿ ಪಡ್ರೆಯ ಬಳಕೆದಾರರನ್ನು ಪ್ರತಿನಿಧಿಸಿ ಶ್ರೀ ಪಡ್ರೆ, ಎಸ್.ಶ್ರೀಹರಿ ಭಟ್, ಶಿವಪ್ರಕಾಶ್ ಪಾಲೆಪ್ಪಾಡಿ, ಶ್ರೀಹರಿ ಭರಣೇಕರ್, ಕೆ.ವೈ. ಸುಬ್ರಹ್ಮಣ್ಯ ಭಟ್ ಭಾಗವಹಿಸಿ ಸಿಬ್ಬಂದಿಗಳ ಕಾರ್ಯ ವೈಖರಿಯಲ್ಲಿನ ಮಹತ್ತರ ಬದಲಾವಣೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸ್ಮರಣಿಕೆ ಫಲಕ ಸಮರ್ಪಿಸಿದರು.
ವರ್ಷಗಳ ಹಿಂದೆ ಪೆರ್ಲ ಸೆಕ್ಷನ್ ಸಿಬ್ಬಂದಿಗಳ ಮೂಲಕ ಕೆಲಸ ಮಾಡಿಸಲು ಆಗುತ್ತಿದ್ದ ಕಷ್ಟನಷ್ಟ ಮಾನಸಿಕ ಕಿರಿಕಿರಿ, ಪ್ರಸ್ತುತ ಜನಪರ ಬದಲಾವಣೆಯನ್ನು ಗುರುತಿಸಿ ಸಾಮಾಜಿಕವಾಗಿ ಮೆಚ್ಚುಗೆ ವ್ಯಕ್ತಪಡಿಸುವ ನಿಟ್ಟಿನಲ್ಲಿ ಪಡ್ರೆ ಗ್ರಾಮದ ಸಮಾನ ಮನಸ್ಕರ ಪ್ರತಿನಿಧಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.