HEALTH TIPS

ಕೋವಿಡ್ ಅವಧಿಯಲ್ಲಿ ಹೆಚ್ಚಿಸಲಾದ ಬಸ್ ದರವನ್ನು ಕೆಎಸ್‌ಆರ್‌ಟಿಸಿ ಹಿಂತೆಗೆದುಕೊಳ್ಳುವುದಿಲ್ಲ - ಸಾರಿಗೆ ಸಚಿವ ಎ.ಕೆ.ಶಶೀಂದ್ರನ್


      ತಿರುವನಂತಪುರ: ಕೋವಿಡ್ ಅವಧಿಯಲ್ಲಿ ಹೆಚ್ಚಿದ ಬಸ್ ದರವನ್ನು ಕೆಎಸ್‌ಆರ್‌ಟಿಸಿ ಹಿಂಪಡೆಯುವುದಿಲ್ಲ ಎಂದು ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಹೇಳಿದ್ದಾರೆ. ಕೇವಲ ಪ್ರಯಾಣಿಕರ ಸಂಖ್ಯೆಯಲ್ಲಿನ ಹೆಚ್ಚಳದ ಕಾರಣ ದರವನ್ನು ಕಡಿಮೆ ಮಾಡಲು ಸಾಧ್ಯವಾಗದು. ಕೋವಿಡ್ ಸಂದರ್ಭದ ವಿಶೇಷ ಸೇವೆಗಳಿಗೆ ಹೆಚ್ಚಿಸಿದ ದರಗಳು ಮುಂದುವರಿಯಲಿದೆ ಎಂದು ಸಚಿವರು  ಹೇಳಿದರು.
       ಕೋವಿಡ್ ಭೀತಿಗಳು ನಿಧಾನವಾಗಿ ಕಡಿಮೆಯಾಗಿ ಬಸ್‌ಗಳಲ್ಲಿನ ದಟ್ಟಣೆ ಹೆಚ್ಚುತ್ತಿರುವ  ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ದರವನ್ನು ಕಡಿಮೆ ಮಾಡಲು ಶಿಫಾರಸು ಮಾಡಿತ್ತು.
      ಆದರೆ ಅದಕ್ಕೆ ಪ್ರಸ್ತುತ ಯಾವುದೇ ಸಾಧ್ಯತೆಗಳಿಲ್ಲ ಎಂದು ಸಾರಿಗೆ ಸಚಿವರು ಹೇಳಿದರು. ಹಳೆಯ ದರಗಳನ್ನು ಪುನಃಸ್ಥಾಪಿಸಿದರೆ ಖಾಸಗಿ ಬಸ್ ಮುಷ್ಕರ ಸೇರಿದಂತೆ ಪ್ರತಿಭಟನೆಗಳನ್ನು ಸರ್ಕಾರ ಎದುರಿಸಬೇಕಾಗಬಹುದು ಎಂದು ಅವರು ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries