HEALTH TIPS

ವಿಧಾನಸಭೆ ಚುನಾವಣೆ ಮತದಾತರ ಪಟ್ಟಿ: ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ : ನೇರವಾಗಿ ನೋಟೀಸು ನೀಡದೆ ಮತದಾತರ ಹೆಸರು ಕೈಬಿಡಕೂಡದು: ಚುನಾವಣೆ ಆಯೋಗ

           

        ಕಾಸರಗೋಡು: ವಿಧಾನಸಭೆ ಚುನಾವಣೆಯ ಕರಡು ಮತದಾತರ ಪಟ್ಟಿಯಿಂದ ಹೆಸರು ಕೈಬಿಡುವ ಮುನ್ನ ಮತಗಟ್ಟೆ ಮಟ್ಟದ ಅಧಿಕಾರಿ ಮತದಾತರಿಗೆ ನೇರವಾಗಿ ನೋಟೀಸು ನೀಡಿ, ಸಹಿ ಪಡೆಯಬೇಕು ಎಂದು ಮತದಾತರ ಪಟ್ಟಿ ನಿರೀಕ್ಷಕ ಕೆ.ಗೋಪಾಲಕೃಷ್ಣ ಭಟ್ ತಿಳಿಸಿದರು.

          ಜಿಲ್ಲಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.  

       ನೋಟೀಸು ನೀಡಿ ಮತದಾತ ಭಾಗವಹಿಸುವ ರೀತಿಯ ಹಿಯರಿಂಗ್ ನಡೆಸಬೇಕು. ನಿಧನರಾದ ಮತದಾತರ ಹೆಸರನ್ನು ಮಾತ್ರ ಪಟ್ಟಿಯಿಂದ ಹೊರತು ಪಡಿಸಲು ಈ ಮಾನದಂಡಗಳಿವೆ 18 ವರ್ಷ ಪೂರ್ತಿಗೊಂಡವರನ್ನು ಮತದಾತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕೊನೆಯ ದಿನಾಂಕ ಡಿ.31 ಆಗಿದೆ. ಪ್ರಕಟಿಸಿರುವ ಕರಡು ಪಟ್ಟಿ ಪ್ರಕಾರ ನಡೆಸಿರುವ ಅಂದಾಜಿನಲ್ಲಿ ಸರಿಸುಮಾರು 30 ಸಾವಿರಕ್ಕೂ ಅಧಿಕ ಮಂದಿ 18 ವರ್ಷ ಪೂರ್ಣಗೊಂಡವರಿದ್ದಾರೆ ಎಂದವರು ತಿಳಿಸಿದರು.

        ಅಂತಿಮ ಮತದಾತರ ಪಟ್ಟಿಯಲ್ಲಿ ಕ್ಷೇತ್ರದ ಪ್ರಧಾನ ವ್ಯಕ್ತಿಗಳು, ಸೆಲೆಬ್ರಟಿಗಳು ಇರುವುದನ್ನು ಖಚಿತಪಡಿಸಬೇಕು ಎಂದು ಚುನಾವಣೆ ಆಯೋಗ ಪ್ರತ್ಯೇಕವಾಗಿ ಆದೇಶ ನೀಡಿದೆ. ವಿಶೇಷಚೇತನರಾದ ಮತದಾತರೂ ಮತದಾತರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಬೇಕು. ಒಬ್ಬ ಮತದಾತರಿಗೆ ರಾಜ್ಯದಲ್ಲಿ ಒಂದಕ್ಕಿಂತ ಅಧಿಕ ಮತ ಇರುವುದು ಪರಿಶೀಲನೆಯಿಂದ ಪತ್ತೆ ಮಾಡಲು ಸಾಧ್ಯ ಎಂದವರು ನುಡಿದರು. 

          ರಾಜಕೀಯ ಪಕ್ಷಗಳು ಮತಗಟ್ಟೆ ಮಟ್ಟದ ಏಜೆಂಟರನ್ನು ನೇಮಿಸಿ ಬಿ.ಎಲ್.ಒ.ಗಳ ಚಟುವಟಿಕೆಗಳಿಗೆ ಸಹಾಯ ಮಾಡಬೇಕು ಎಂದವರು ಆದೇಶಿಸಿದರು. 

         ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಮಾತನಾಡಿ ಕೋವಿಡ್ ಕಟ್ಟುನಿಟ್ಟನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಈ ಬಾರಿಯ ವಿಧಾನಸಭೆ ಚುನಾವಣೆ ನಡೆಯಲಿದೆ. ಮತಗಟ್ಟೆಗಳ ಸಂಖ್ಯೆ 1570 ಆಗಲಿದ್ದು, ಸದ್ರಿ ಇರುವ ಮತಗಟ್ಟೆಗಳಿಗೆ ತತ್ಸಂಬಧಿ ಬೂತ್ ಗಳನ್ನು ಮಂಜೂರು ಮಾಡಬೇಕಾಗಿ ಬಂದೀತು ಎಂದವರು ತಿಳಿಸಿದರು.

       ಸೌಲಭ್ಯಗಳು ಕಡಿಮೆಯಿರುವ ಅಂಗನವಾಡಿಗಳಲ್ಲಿ ಚಟುವಟಿಕೆ ನಡೆಸುವ ಕನಿಷ್ಠ ಪಕ್ಷ 23 ಬೂತ್ ಗಳ ಬದಲಾವಣೆ ಅಗತ್ಯವಾದೀತು. ಹಾಸುಗೆ ಹಿಡಿದಿರುವ ರೋಗಿಗಳಿಗೆ ಅಂಚೆ ಮತದಾನ ಸೌಲಭ್ಯ ಏರ್ಪಡಿಸಲಾಗುವುದು. ಅಂಚೆ ಮತಗಳು ಬಹುತೇಕ ಅಸಿಂಧುವಾಗಿರುವ ಹಿನ್ನೆಲೆಯಲ್ಲಿ ಅಂಚೆ ಮತದಾನ ಸಂಬಂಧ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಆಗ್ರಹಿಸಿದರು.

                ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂuಟಿಜeಜಿiಟಿeಜರಾಮನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ.ಕುಂಞಂಬು ನಂಬ್ಯಾರ್, ಮೂಸಾ ಬಿ. ಚೆರ್ಕಳ, ಕೆ.ಎ.ಮುಹಮ್ಮದ್ ಹನೀಫ, ವಿ.ರಾಜನ್, ಮಾನ್ಯವೆಲ್ ಮೇಲೋತ್, ಕೂಕಾಲ್ ಬಾಲ;ಕೃಷ್ಣನ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ಇತರ ಸಿಬ್ಬಂದಿ ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries