ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಬೇಬಿ ಬಾಲಕೃಷ್ಣನ್ , ಉಪಾಧ್ಯಕ್ಷರಾಗಿ ಷಾನವಾಝ್ ಪಾದೂರು ಆಯ್ಕೆಗೊಂಡಿದ್ದಾರೆ.
ಬುಧವಾರ ನಡೆದ ಆಯ್ಕೆಯಲ್ಲಿ ಇವರಿಗೆ 8 ಮತಗಳು ಲಭಿಸಿವೆ. ಪ್ರತಿಸ್ಪರ್ಧಿಯಾಗಿದ್ದ ಜಮೀಲಾ ಸಿದ್ದೀಕ್ ಅವರಿಗೆ 7 ಮತಗಳು ಬಂದಿದ್ದುವು. ಇಬ್ಬರು ಸದಸ್ಯರು ಮತದಾನ ನಡೆಸಿರಲಿಲ್ಲ. ಚುನಾವಣೆ ಅಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಬೇಬಿ ಬಾಲಕೃಷ್ಣನ್ ಅವರ ಪದಗ್ರಹಣದಲ್ಲಿ ಪ್ರತಿಜ್ಞೆ ತಿಳಿಸಿಕೊಟ್ಟರು.
ಬುಧವಾರ ನಡೆದ ಆಯ್ಕೆಯಲ್ಲಿ 17 ಮಂದಿ ಸದಸ್ಯರಲ್ಲಿ 8 ಮಂದಿಗೆ ಷಾನವಾಝ್ ಪಾದೂರು ಅವರಿಗೆ ಮತಚಲಾಯಿಸಿದ್ದಾರೆ. ಪ್ರತಿಸ್ಪರ್ಧಿ ಜೋಮೋನ್ ಜೋಸೆಫ್ ಅವರಿಗೆ 7 ಮಂದಿ ಮತದಾನ ಮಾಡಿದ್ದಾರೆ. ಇಬ್ಬರು ಸದಸ್ಯರು ಯಾರಿಗೂ ಮತದಾನ ನಡೆಸಿರಲಿಲ್ಲ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರು ಷಾನವಾಝ್ ಅವರ ಪದಗ್ರಹಣ ವೇಳೆ ಪ್ರತಿಜ್ಞೆ ತಿಳಿಸಿಕೊಟ್ಟರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಚುನಾವಣೆ ಪ್ರಕ್ರಿಯೆ ನಿಯಂತ್ರಿಸಿದರು.
ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್, ಮಾಜಿ ಸಂಸದ ಪಿ.ಕರುಣಾಕರನ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್, ಮಾಜಿ ಶಾಸಕರಾದ ಕೆ.ಪಿ.ಸತೀಶ್ಚಂದ್ರನ್, ಸಿ.ಎಚ್.ಕುಂಞಂಬು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಡಾ.ವಿ.ಪಿ.ಪಿ.ಮುಸ್ತಫಾ, ಹರ್ಷಾದ್ ವರ್ಕಾಡಿ, ನ್ಯಾಯವಾದಿ ಗೋವಿಂದನ್ ಪಳ್ಳಿಕ್ಕಾಪಿಲ್, ಟಿ.ಕೃಷ್ಣನ್, ಪಿ.ವಿ.ಬಾಲಕೃಷ್ಣನ್, ಮೊಯ್ದೀನ್ ಕುಂuಟಿಜeಜಿiಟಿeಜ ಕಳನಾಡು, ಅಝೀಜ್ ಕಡಪ್ಪುರಂ, ಕರಿವೆಳ್ಲೂರು ವಿಜಯನ್, ಕುರಿಯಾಕೋಸ್ ಪ್ಲಾಪರಂಬಿಲ್, ನ್ಯಾಯವಾದಿ ಎ.ಗೋವಿಂದನ್ ನಾಯರ್ ಮೊದಲಾದವರು ಉಪಸ್ಥಿತರಿದ್ದರು.