ಪತ್ತನಂತಿಟ್ಟು: 'ಬುರೆವಿ' ಚಂಡಮಾರುತಕ್ಕೆ ಸಂಬಂಧಿಸಿದಂತೆ ತೀರ್ವತರ ಗಾಳಿಯಿಂದಾಗಿ ಶಬರಿಮಲೆ ತೀರ್ಥಯಾತ್ರೆಗಳನ್ನು ನಿರ್ಬಂಧಿಸಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸ್ತುತ ಎರಡು ಸಾವಿರ ಭಕ್ತರಿಗೆ ಮತ್ರ ಪ್ರವೇಶಾನುಮತಿಯ ಕಾರಣ ಯಾವುದೇ ಗಂಭೀರತೆಗಳಿಲ್ಲ. ಪತ್ತನಂತಿಟ್ಟು ಜಿಲ್ಲೆಯಲ್ಲೂ ಚಂಡಮಾರುತದ ಸಿದ್ಧತೆಗಳು ಪೂರ್ಣಗೊಂಡಿವೆ.
ಬುರೆವಿ ಚಂಡಮಾರುತವು ಶಬರಿಮಲೆಗೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ವಿಪತ್ತು ನಿರ್ವಹಣಾ ಇಲಾಖೆಯು ಕಳವಳ ವ್ಯಕ್ತಪಡಿಸಿದೆ. ಪಂಪಾದಿಂದ ಸನ್ನಿಧಿಯವರೆಗಿನ ಅರಣ್ಯ ರಸ್ತೆಯಲ್ಲಿ ಮರಗಳು ಬಿದ್ದು ಹೆಚ್ಚಿನ ಅಪಾಯಗಳಾಗುವ ಸಾಧ್ಯತೆಯಿದೆ. ಈ ಪರಿಸ್ಥಿತಿಯಲ್ಲಿ ಭಕ್ತರ ಸುರಕ್ಷತೆಯನ್ನು ಹೇಗೆ ಖಚಿತಪಡಿಸಿಕೊಳ್ಳಬೇಕು ಎಂಬುದರ ಕುರಿತು ಜಿಲ್ಲಾಡಳಿತ ಚರ್ಚಿಸುತ್ತಿತ್ತು.