ಮಂಜೇಶ್ವರ: ಇತಿಹಾಸ ಪ್ರಸಿದ್ದ ಅರಿಬೈಲು ಶ್ರೀ ನಾಗಬ್ರಹ್ಮ ದೇವರ ಕಂಬಳ ಶುಕ್ರವಾರ ವಿಜ್ರ0ಭಣೆಯಿಂದ ಜರಗಿತು. ತಂತ್ರಿಗಳಾದ ರಾಧಾಕೃಷ್ಣ ಅರಿನಾಯರು ಉಪವಾಸದ ಕೋಣಗಳನ್ನು ಇಳಿಸಿ ಚಾಲನೆ ನೀಡಿದರು. ಬಳಿಕ ಓಟದ ಕೋಣಗಳನ್ನು ಇಳಿಸಿ ಕಂಬಳ ನಡೆಯಿತು.
ಕಂಬಳದ ವಿವಿಧ ಸ್ಪರ್ಧೆಗಳಲ್ಲಿ ತಲಪಾಡಿ ಪಂಜಲ ಕೀರ್ಥನ್ ರವೀಂದ್ರ ಪಕಳ ಪ್ರಥಮ, ಕಡಂಬಾರು ಕೆಳಗಿನ ಮನೆ ಸಂಜೀವ ಮಾಧವ ಮಡಿವಾಳ ದ್ವಿತೀಯ, ಕೌಡೂರು ಬೀಡು ಮಾರಪ್ಪ ಭಂಡಾರಿ, ಪಟ್ಟತ್ತಮೊಗರು ಹೊಸ ಮನೆ ಕೃಷ್ಣ ಶೆಟ್ಟಿ, ಮುಲ್ಲೇರಿಯಾದ ಕಾರ್ಳೆ ಮಹಾವಿಷ್ಣು ಯುವ ಬಾಂಧವರು, ಮುಲ್ಲೇರಿಯ ಎಡಪ್ಪಾಡಿ ನಾರಾಯಣ ಶೆಟ್ಟಿ, ಪಜಿಂಗಾರು ಆನಂದ, ಕುಂಜತ್ತೂರು ಹೊಸಮನೆ ನಾಂನ್ಯೂ ಶೆಟ್ಟಿ ತಂಡಗಳು ಬಹುಮಾನ ಗಳಿಸಿದವು.
ನೇಗಿಲು ವಿಭಾಗದಲ್ಲಿ ಮೀನಾಡಿ ಕಿನ್ಯ ಕಾರ್ತಿಕ್ ನಿಕೇತ್ ಅವರ ಕೋಣಗಳು ಪ್ರಥಮ ಗಳಿಸಿತು. ಉಪವಾಸದ ಅಡ್ಡ ಹಲಗೆ ವಿಭಾಗದಲ್ಲಿ ಅಬ್ದುಲ್ ರಹಿಮಾನ್ ಪಾವೂರು ಕೋಣಗಳು ಭಾಗವಹಿಸಿದ್ದವು.
ನಾಗಬ್ರಹ್ಮರ್ ಮತ್ತೆ ನಾಗಬಂಟ ನೇಮೋತ್ಸವ ಜರಗಿತು. ಗೋಪಾಲ ಶೆಟ್ಟಿ ಆರಿಬೈಲು ಕಂಬಳ ನಿರ್ವಹಣೆ ಮಾಡಿದರು.ಸಹಸ್ರಾರು ಭಕ್ತರು ಕಂಬಳ ವೀಕ್ಷಿಸಿ ಪುನೀತರಾದರು.