ನವದೆಹಲಿ : ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಸಿಬಿಐ ತನಿಖೆಯ ವಿರುದ್ಧ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ತಿರಸ್ಕರಿದೆ.
ಈ ಹಿಂದೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರದ ಮನವಿಯನ್ನು ತಿರಸ್ಕರಿಸಿತ್ತು. ಸುಪ್ರೀಂ ಕೋರ್ಟ್ ಕೂಡಾ ಹೈಕೋರ್ಟ್ ನ ತೀರ್ಪನ್ನು ಈ ಮೂಲಕ ಎತ್ತಿಹಿಡಿದಿದೆ. ಸುಪ್ರೀಂ ಕೋರ್ಟ್‍ನಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಯಿತು. ನ್ಯಾಯಮೂರ್ತಿ ನಾಗೇಶ್ವರ ರಾವ್ ನೇತೃತ್ವದ ನ್ಯಾಯಪೀಠ ವಿವರವಾದ ತೀರ್ಪು ನೀಡಿತು.
ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ಸಿಬಿಐ 2019 ರ ಅಕ್ಟೋಬರ್‍ನಲ್ಲಿ ಪ್ರಕರಣ ದಾಖಲಿಸಿದೆ ಎಂದು ಸಿಬಿಐ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷರ್ ಮೆಹ್ತಾ ಇಂದು ಸುಪ್ರೀಂ ಕೋರ್ಟ್‍ಗೆ ತಿಳಿಸಿದ್ದರು. ತನಿಖೆಯ ಭಾಗವಾಗಿ ಶರತ್ ಲಾಲ್ ಮತ್ತು ಕೃಪೇಶ್ ಅವರ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆದರೆ ಸರ್ಕಾರವು ತನಿಖೆಗೆ ಸಹಕರಿಸಿರಲಿಲ್ಲ. ಹೈಕೋರ್ಟ್ ಸಿಂಗಲ್ ಬೆಂಚ್‍ನ ಕೆಲವು ಹೇಳೀಕೆಗಳನ್ನು ವಿಭಾಗೀಯ ಪೀಠ ರದ್ದುಪಡಿಸಿದೆ ಎಂದು ರಾಜ್ಯ ಸರ್ಕಾರ ಗಮನಸೆಳೆದಿತ್ತು.
ತನಿಖೆಯಲ್ಲಿ ನ್ಯೂನತೆಗಳಿದ್ದರೆ, ಹೆಚ್ಚಿನ ತನಿಖೆಯನ್ನು ನಿರ್ದೇಶಿಸುವುದು ವಿಚಾರಣಾ ನ್ಯಾಯಾಲಯದ ಮೇಲಿದೆ ಎಂದು ಮನಿಂದರ್ ಸಿಂಗ್ ಗಮನಸೆಳೆದರು. ಆದರೆ, ಸಿಬಿಐ ತನಿಖೆಯ ಮೂಲಕವೇ ಸತ್ಯವನ್ನು ಬಹಿರಂಗಪಡಿಸಬಹುದು ಎಂದು ಹಿರಿಯ ವಕೀಲ ವಿ. ಗಿರಿ ಮತ್ತು ಶರತ್ ಲಾಲ್ ಮತ್ತು ಕೃಪೇಶ್ ಅವರ ಪೆÇೀಷಕರ ಪರವಾಗಿ ಹಾಜರಾದ ವಕೀಲ ಎಂ.ಆರ್.ರಮೇಶ್ ಬಾಬು ನ್ಯಾಯಾಲಯಕ್ಕೆ ತಿಳಿಸಿದರು.