ಮಂಜೇಶ್ವರ: ಪ್ರಜಾಪ್ರಭುತ್ವ ನೀತಿಗೆ ವಿವಿಧತೆಯ ಸೌಂದರ್ಯ ಒದಗಿಸಿಕೊಟ್ಟ ರಾಜ್ಯದ ಗಡಿಯಲ್ಲಿ ನೆಲೆಗೊಂಡಿರುವ ಮತಗಟ್ಟೆ ಭಾಷಾ ಬಹುಶ್ರುತತೆಯೊಂದಿಗೆ ಶ್ರೀಮಂತಿಕೆ ಒದಗಿಸಿದೆ.
ಮಂಜೇಶ್ವರ ಪಂಚಾಯತಿಯ ಕುಂಜತ್ತೂರಿನ ತೂಮಿನಾಡು ಮತಗಟ್ಟೆಯಲ್ಲಿ ಭಾಷಾ ವಿವಿಧತೆ ಏಕತೆಯ ಸಂಕೇತವಾಗಿ ಕಂಡುಬಂದಿತ್ತು. ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಕಟ್ಟುನಿಟ್ಟುಗಳನ್ನು ಪಾಲಿಸುವಲ್ಲಿ ಇಲ್ಲಿನ ಮತದಾತರು ತೋರಿದ ಸಹಕಾರ ಇತರರಿಗೆ ಮಾದರಿಯಾಗಿತ್ತು.
ಕನ್ನಡ, ತುಳು, ಮಲೆಯಾಳಂ, ಬ್ಯಾರಿ, ಉರ್ದು ಸಹಿತ ಭಾಷಿಗರು ಪರಸ್ಪರ ಆಯಾ ಭಾಷೆಗಳಲ್ಲಿ ಮಾತುಕತೆ ನಡೆಸುತ್ತಿದ್ದ ರೀತಿಯೂ ಇಲ್ಲಿ ಮುದನೀಡುತ್ತಿತ್ತು. ಕುಂಜತ್ತೂರು ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಜೇಶ್ವರ ಪಂಚಾಯತ್ ನ ತೂಮಿನಾಡ್ ವಾರ್ಡಿನ ಮತಗಟ್ಟೆಗಳು ಇದ್ದುವು.