ಕೊಚ್ಚಿ: ಕೋವಿಡ್ ಸೋಂಕಿ ವಿರುದ್ಧ ಹೋರಾಡಲು ಮುಂದೆ ಬಂದು ಬಳಿಕತೀವ್ರ ಆರೋಗ್ಯ ಸಮಸ್ಯೆಗಳಿಗೊಳಗಾಗಿ ಚಿಕಿತ್ಸೆಯಲ್ಲಿದ್ದು ಬಳಿಕ ಇದೀಗ ಗುಣಮುಖರಾದ ಯುವ ವೈದ್ಯೆ ಸೇವೆಗೆ ಮರಳಿದ್ದಾರೆ. ತ್ರಿಪುಣಿತ್ತರ ಮೂಲದ ಡಾ. ರಾಶಿ ಕುರುಪ್ ಕೋವಿಡ್ ಮತ್ತು ಅವರ ನಂತರದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬದುಕುಳಿದರು ಮತ್ತು ಆಸ್ಪತ್ರೆಗೆ ಮರಳಿದರು.
33 ರ ಹರೆಯದ ರಾಶಿ ಕುರುಪ್ ಅವರು ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ವ್ಯಾಪಕವಾದ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದ ದಿನಗಳಲ್ಲಿ ಧೈರ್ಯದಿಂದ ಸೇವಾ ಕ್ಷೇತ್ರಕ್ಕೆ ಕಾಲಿಟ್ಟ ವ್ಯಕ್ತಿ. ರಾಶಿ 2020 ರ ಅಕ್ಟೋಬರ್ 23 ರಂದು ಕಲೂರಿನ ಪಿವಿಎಸ್ ಕೋವಿಡ್ ಅಪೆಕ್ಸ್ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಕರ್ತವ್ಯಕ್ಕೆ ಹಾಜರಾದವರು. ತನ್ನ ಒಂದೂವರೆ ವರ್ಷದ ಮಗಳ ಆರೈಕೆಯನ್ನು ಕುಟುಂಬಕ್ಕೆ ಬಿಟ್ಟುಕೊಟ್ಟು ದಿಟ್ಟ ಸೇವಾ ಕೈಂಕರ್ಯ ಮಾಡಿದವರು. ಕೋವಿಡ್ ಪ್ರಕರಣಗಳನ್ನು ಸುಮಾರು ಎರಡು ವಾರಗಳವರೆಗೆ ಯಶಸ್ವಿಯಾಗಿ ನಿರ್ವಹಿಸಿದ್ದರು. ಈ ಮಧ್ಯೆ ವೈದ್ಯೆ ದೈಹಿಕ ಸಮಸ್ಯೆಗಳನ್ನು ಎದುರಿಸತೊಡಗಿದರು.
ಆರಂಭದಲ್ಲಿ ಲಘು ಜ್ವರ ಮಾತ್ರವಿತ್ತು. ಕೋವಿಡ್ ಪ್ರತಿಜನಕ ಪರೀಕ್ಷೆಯಲ್ಲಿ ನಕಾರಾತ್ಮಕತೆಯನ್ನು ದಾಖಲಿಸಿದಾಗ ನಿರಾಳರಾದರು. ಆದಾಗ್ಯೂ, ತೀವ್ರ ಉಸಿರಾಟದ ತೊಂದರೆ ಮತ್ತು ಎದೆ ನೋವಿನಿಂದ ಕೋವಿಡ್ ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ಸಕಾರಾತ್ಮಕತೆಯನ್ನು ದೃಢಪಟ್ಟಿತು. ಇದರೊಂದಿಗೆ ಅವರನ್ನು ಪಿವಿಎಸ್ ಆಸ್ಪತ್ರೆಯ ಕೋವಿಡ್ ವಾರ್ಡ್‍ಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು.
ಕೋವಿಡ್ ದೃಢೀಕರಿಸಲ್ಪಟ್ಟಾಗ ಮತ್ತು ಚಿಕಿತ್ಸೆಯಲ್ಲಿದ್ದಾಗ ರಾಶಿ ಅವರ ಆರೋಗ್ಯವು ಮತ್ತಷ್ಟು ಹದಗೆಟ್ಟಿತು. ಎರಡೂ ಶ್ವಾಸಕೋಶಗಳಲ್ಲಿ ನ್ಯುಮೋನಿಯಾ ಬಾಧೆಗೊಳಗಾಗದರು. ಅವರ ಸ್ಥಿತಿ ಹದಗೆಟ್ಟಿತು ಮತ್ತು ಅವರು ಹತ್ತು ದಿನಗಳ ಕಾಲ ಐಸಿಯುನಲ್ಲಿ ಇರಬೇಕಾಯಿತು. ರಾಶಿ ಅವರ ರೋಗ ಚಿಹ್ನೆಯನ್ನು ಸಿ ವರ್ಗದ ಕೋವಿಡ್ ರೋಗಿಯೆಂದು ಪರಿಗಣಿಸಲಾಯಿತು. ಚಿಕಿತ್ಸೆಯ ಬಳಿಕ ಅವರನ್ನು ಕೋಣೆಗೆ ಸ್ಥಳಾಂತರಿಸಲಾಯಿತು. ಆದರೆ ನಂತರ ಇತರ ಆರೋಗ್ಯ ಸಮಸ್ಯೆಗಳು ತೀವ್ರಗೊಂಡವು.
ಎದೆ ನೋವು ಮತ್ತು ಉಸಿರಾಟದ ತೊಂದರೆ ಉಲ್ಬಣಗೊಳ್ಳುತ್ತಲೇ ಇತ್ತು ಮತ್ತು ಮಾತನಾಡಲು,ನಡೆಯಲು ಸಾಧ್ಯವಾಗಲಿಲ್ಲ. ಹೃದಯ ಪರೀಕ್ಷೆಯು ಸಣ್ಣ ಹೃದಯಾಘಾತದ ಸಾಧ್ಯತೆಯನ್ನು ಬಹಿರಂಗಪಡಿಸಿತು. ಕೋವಿಡ್‍ನಿಂದ ವಿಮೋಚನೆಗೊಂಡವರಲ್ಲಿ ಇದು ಗಂಭೀರ ಸ್ಥಿತಿಯಾಗಿದೆ. ಇದರೊಂದಿಗೆ ಪೂರ್ಣ ಸಮಯದ ವಿಶ್ರಾಂತಿ ಅಗತ್ಯವಾಯಿತು. ಚಿಕಿತ್ಸೆ ಮುಂದುವರೆಯಿತು. ಆದರೆ ಅವರು ಮಾತನಾಡುವಾಗ ಅಸ್ವಸ್ಥತೆ ಕಂಡುಬರುತ್ತಿತ್ತು. ಎದೆ ನೋವಿನ ಪರಿಹಾರದಿಂದ ವೈದ್ಯರಿಗೆ ನಿರಾಳವಾಯಿತು.
ದೀರ್ಘಕಾಲದ ಚಿಕಿತ್ಸೆಯ ನಂತರ ಅವರ ಆರೋಗ್ಯವು ಚೇತರಿಸಿಕೊಳ್ಳುವುದರೊಂದಿಗೆ, ಅವರು ಮರಳಿ ಕರ್ತವ್ಯಕ್ಕೆ ತೆರಳುವ ನಿರ್ಧಾರ ಪ್ರಕಟಿಸಿದರು. ಇದು ಸಂಬಂಧಿಕರು, ಗೆಳೆಯರಿಗೆ ಆತಂಕಮೂಡಿಸಿತು. ಆದರೆ ವೈದ್ಯೆ ಕೆಲಸಕ್ಕೆ ಮರಳಲು ದೃಢ ನಿರ್ಧಾರ ತೆಗೆದುಕೊಂಡರು. ರಾಶಿ ಕಳೆದ ಸೋಮವಾರ ಕೋವಿಡ್ ರೋಗಿಗಳ ಆರೈಕೆಗಾಗಿ ಮತ್ತೆ ಕರ್ತವ್ಯ ಪುನರಾರಂಭಿಸಿದರು.
ಕೋವಿಡ್ ದೃಢೀಕರಿಸಲ್ಪಟ್ಟ ಮತ್ತು ಚಿಕಿತ್ಸೆಗೆ ಒಳಗಾದ ಸಮಯದಲ್ಲಿ ತನ್ನ ಸಹೋದ್ಯೋಗಿಗಳಿಂದ ಪಡೆದ ಬೆಂಬಲ ಮತ್ತು ಕಾಳಜಿಯು ಕೆಲಸವು ಮತ್ತೆ ಕರ್ತವ್ಯದತ್ತ ಮರಳಲು ಪ್ರೇರೇಪಿಸಿತು ಎಂದು ವೈದ್ಯರು ವಿವರಿಸುತ್ತಾರೆ. ಪತಿ ಶ್ಯಾಮ್‍ಕುಮಾರ್ ಅವರ ಸಂಪೂರ್ಣ ಬೆಂಬಲದೊಂದಿಗೆ ವೈದ್ಯೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೈಪುರದಿಂದ ಪದವಿ ಪಡೆದ ರಾಶಿ, ಅಲಪ್ಪುಳ ಮೂಲದ ಎಂ.ಜಿ.ರಾಧಾಕೃಷ್ಣನ್ ಮತ್ತು ಶೋಭಾ ಅವರ ಪುತ್ರಿ.