ತಿರುವನಂತಪುರಂ: ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ ಡಿಸೆಂಬರ್ 26ರಂದು ನಡೆಯುವ ಮಂಡಲ ಪೂಜೆಯ ವೇಳೆ ಅಯ್ಯಪ್ಪ ಸ್ವಾಮಿಯನ್ನು ಅಲಂಕರಿಸುವ 453 ಸವರನ್ನಿನ ಚಿನ್ನದ ಅಂಗಿಯನ್ನು ಶಬರಿಮಲೆಗೆ ತರಲಾಗಿದೆ.
ಅರಣ್ಮುಲದಲ್ಲಿನ ಪಾರ್ಥಸಾರಥಿ ದೇವಸ್ಥಾನದಿಂದ ಅಲಂಕೃತ ವಾಹನದಲ್ಲಿ ಡಿ. 22ರಂದು ಮೆರವಣಿಗೆ ಮೂಲಕ ಮಂಡಲಪೂಜೆಗೆ ಅದನ್ನು ಕರೆತರಲಾಗುತ್ತದೆ. ಈ ಬಾರಿ ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಭಕ್ತರು ಈ ಬಾರಿ ಪಲ್ಲಕ್ಕಿಯನ್ನು ಎದುರುಗೊಳ್ಳುವ ಸಂಪ್ರದಾಯವನ್ನು ನಿಷೇಧಿಸಲಾಗಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ನಡಿಗೆಯನ್ನು ಕಳೆದ ತಿಂಗಳ 15ರಂದು ಮಂಡಲ ಪೂಜೆಯ ಬಳಿಕ ಆರಂಭಿಸಲಾಗಿತ್ತು. ಇದರ ಬಳಿಕ 16ನೇ ತಾರೀಕಿನಿಂದ ದೈನಂದಿನ ಪೂಜೆ ನಡೆಯುತ್ತಿದೆ. ಪ್ರಸ್ತುತ ದಿನಕ್ಕೆ 2000 ಭಕ್ತರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತಿದೆ.
ಪಂಪಾದ ಗಣಪತಿ ದೇವಾಲಯದಲ್ಲಿರುವ ನಡಪ್ಪಂಡಲ್‌ನಲ್ಲಿ ತಂಕ ಅಂಗಿಯನ್ನು ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಬಳಿಕ ಮತ್ತೆ ಮೆರವಣಿಗೆಯಲ್ಲಿ ಸಾಗುತ್ತದೆ. ದೇವಸ್ವಂನ ಅಧಿಕಾರಿಗಳು ಸರಂಕುತಿಯಲ್ಲಿ ಮೆರವಣಿಗೆಯನ್ನು ಬರಮಾಡಿಕೊಳ್ಳುತ್ತಾರೆ. ಅಲಂಕೃತ ಹಾಸಿಗೆಯಲ್ಲಿ ಚಿನ್ನದ ಅಂಗಿಯನ್ನು ಶಬರಿಮಲೆಗೆ ಡಿ 22ರಂದು ತರಲಾಗುತ್ತದೆ.
ಡಿ. 25ರಂದು ಚಿನ್ನದ ಅಂಗಿ ಮೆರವಣಿಗೆಯು ಸಾಗಿ 18ನೇ ಮೆಟ್ಟಿಲ ಬಳಿ ಸಾಗಿದಾಗ ತಂತ್ರಿಗಳು ಅದನ್ನು ಸ್ವಾಗತಿಸುತ್ತಾರೆ. ಬಳಿಕ ಅದನ್ನು ಸನ್ನಿಧಾನಕ್ಕೆ ಕೊಂಡೊಯ್ಯಲಾಗುತ್ತದೆ. ಸಂಜೆ 6.30ರ ವೇಳೆಗೆ ಅಯ್ಯಪ್ಪ ಸ್ವಾಮಿಗೆ ಅದನ್ನು ತೊಡಿಸಲಾಗುತ್ತದೆ. ಅಂದು ವಿಶೇಷ ದೀಪಾವಳಿ ಆಚರಣೆಯಾಗುತ್ತದೆ. ಡಿ. 26ರಂದು ಮಧ್ಯಾಹ್ನ 12 ಗಂಟೆಗೆ ಮಂಡಲ ಪೂಜೆ ನಡೆಯುತ್ತದೆ.