ಪೆರ್ಲ:ಗಡಿ ಭದ್ರತಾ ಪಡೆ (ಬಿಎಸ್ ಎಫ್)ಯ 56ನೇ ಸಂಸ್ಥಾಪನಾ ದಿನದ ಅಂಗವಾಗಿ ಬಿ.ಎಸ್.ಎಫ್ ನಿರ್ದೇಶನಾಲಯ ಕೊಡ ಮಾಡುವ 'ಅತಿ ಉತ್ಕೃಷ್ಟ ಸೇವಾ ಪದಕ್' ಗೌರವ ಪದಕಕ್ಕೆ ಬಿಎಸ್ ಎಫ್ ಯೋಧ ಎಣ್ಮಕಜೆ ಪಂಚಾಯಿತಿ ಪಡ್ರೆಯ ಬಾಲಕೃಷ್ಣ ಬಿ. ಭಾಜನರಾಗಿದ್ದಾರೆ.
ಪಡ್ರೆ ಗ್ರಾಮದ ಬದಿಯ ದಿ.ಕುಂಞಪ್ಪ ನಾಯ್ಕ ಹಾಗೂ ಸರಸ್ವತಿ ದಂಪತಿಗಳ ಪುತ್ರ ಬಾಲಕೃಷ್ಣ 2002ರ ಜೂನ್ 5ರಂದು ಭಾರತೀಯ ಸೈನ್ಯಕ್ಕೆ ಪಾದಾರ್ಪಣೆ ಮಾಡಿದ್ದು ಜಾಖರ್ಂಡ್ ಹಜಾರಿಭಾಗ್ ನಲ್ಲಿ ಶಸ್ತ್ರ ಬೋಧಕ ತರಬೇತಿ ಪಡೆದು ಆರಂಭದ 3 ವರ್ಷ ರಾಜಸ್ಥಾನದ ಗಡಿ, 1 ವರ್ಷ ಗುಜರಾತ್ ಗಡಿ, 6 ವರ್ಷ ಕಾಶ್ಮೀರದ ಗಡಿ ಹಾಗೂ ಪ್ರಸ್ತುತ 6 ವರ್ಷಗಳಿಂದ ಪಶ್ಚಿಮ ಬಂಗಾಳದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಸರ್ಕಾರಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಅವರು ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನಗಳನ್ನು ಪಡೆದಿದ್ದಾರೆ.