ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯ ಮೂರನೇ ಹಂತದ ಚುನಾವಣೆ ಡಿ.14 ರಂದು ನಡೆಯುವ ಜಿಲ್ಲೆಗಳಲ್ಲಿ ಇಂದು ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ. ಡಿಸೆಂಬರ್ 14 ರಂದು ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.
ಬಹಿರಂಗ ಪ್ರಚಾರವು ಇಂದು ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಕೋವಿಡ್ ಮಾನದಂಡಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು, ಕಾರ್ಯಕರ್ತರು ಮತ್ತು ಪ್ರಚಾರ ವಾಹನಗಳು ಜನಸಂದಣಿ ರಹಿತರಾಗಿ ಪ್ರಚಾರದ ಕೊನೆಯ ಘಟ್ಟವನ್ನು ಪೂರೈಸಲು ಸೂಚಿಸಲಾಗಿದೆ.
ಜನದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಬಹಿರಂಗ ಪ್ರಚಾರದ ಭಾಗವಾಗಿ, ರೋಡ್ ಶೋ ಮತ್ತು ರ್ಯಾಲಿಯಲ್ಲಿ ಗರಿಷ್ಠ ಮೂರು ವಾಹನಗಳಿಗೆ ಅವಕಾಶ ನೀಡಲಾಗುವುದು. ಮತ ಎಣಿಕೆ ಡಿಸೆಂಬರ್ 16 ರಂದು ನಡೆಯಲಿದೆ.