ತಿರುವನಂತಪುರ: ಸಿಸ್ಟರ್ ಅಭಯ ಅವರ ಶಿರಚ್ಚೇಧನಗೈದು ಬಾವಿಯಲ್ಲಿ ಎಸೆಯಲಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅಭಯಳ ಸಾವು ಆತ್ಮಹತ್ಯೆಯಾಗಿರಲಿಲ್ಲ ಮತ್ತು ನ್ಯಾಯಾಲಯದ ಮುಂದೆ ನೀಡಿದ ಸಾಕ್ಷ್ಯವು ವಿಶ್ವಾಸಾರ್ಹವಾಗಿದೆ. ತಿರುವನಂತಪುರ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಕೆ ಸನಲ್ ಕುಮಾರ್ ಅವರು ತೀರ್ಪಿನಲ್ಲಿ ಆರೋಪಿಗಳ ಪಾತ್ರವನ್ನು ಮೌಲ್ಯೀಕರಿಸಲಾಗಿದೆ ಎಂದು ಹೇಳಿದ್ದಾರೆ.
ಫಾ. ಥಾಮಸ್ ಕೊಟ್ಟೂರ್ ಅವರ ತಪೆÇ್ಪಪ್ಪಿಗೆ ಮತ್ತು ಅದಕ್ಕೆ ಸಂಬಂಧಿಸಿ ರಾಜು ಅವರ ಹೇಳಿಕೆಗಳು ಕೊಲೆಗೈದಿರುವ ನಿಖರತೆಯನ್ನು ಸ್ಪಷ್ಟಪಡಿಸುತ್ತದೆ. ಫಾ. ಥಾಮಸ್ ಕೊಟ್ಟೂರು ಕಾನ್ವೆಂಟ್‍ಗೆ ನಿಯಮಿತ ಸಂದರ್ಶಕರಾಗಿದ್ದರು. ಸಾಕ್ಷ್ಯ ಮತ್ತು ವೈದ್ಯಕೀಯ ಪರೀಕ್ಷೆಯ ಫಲಿತಾಂಶಗಳಿಂದ ಸೆಫಿಯಾಳ ಪಾತ್ರ ಸ್ಪಷ್ಟವಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಮುಂಜಾನೆ ಚರ್ಚಿನ ಅಡುಗೆಮನೆಯಲ್ಲಿ ಆಶ್ರಯ ಪಡೆದ ಆರೋಪಿಗಳಿಗೆ ಅಭಯಳನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಅಂತಿಮ ತೀರ್ಪಿನಲ್ಲಿ, ಸಿಬಿಐ ನ್ಯಾಯಾಲಯವು ಥಾಮಸ್ ಕೊಟೂರ್ ಅವರು ಪ್ರಾಸಿಕ್ಯೂಷನ್ ಸಾಕ್ಷಿ ಕಲರ್ಕೋಡ್ ವೇಣುಗೋಪಾಲ್ ಗೆ ನೀಡಿದ ತಪೆÇ್ಪಪ್ಪಿಗೆ ಬಲವಾದ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಿಸ್ಟರ್ ಸೆಫಿಯ ವೈದ್ಯಕೀಯ ಪರೀಕ್ಷೆಯ ಫಲಿತಾಂಶವನ್ನು ನ್ಯಾಯಾಲಯವು ಈ ಪ್ರಕರಣದ ಮತ್ತೊಂದು ಬಲವಾದ ಸಾಕ್ಷ್ಯವಾಗಿ ಪರಿಗಣಿಸಿತು. ಪ್ರಕರಣದ ದಾರಿತಪ್ಪಿಸಲು ಯತ್ನಿಸಿದ್ದಕ್ಕಾಗಿ ಮಾಜಿ ಅಪರಾಧ ವಿಭಾಗದ ಎಸ್.ಪಿ ಕೆ.ಟಿ ಮೈಕೆಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಬಿಐ ನ್ಯಾಯಾಲಯ ನಿರ್ದೇಶಿಸಿದೆ. ನಿರ್ಣಾಯಕ ಸಾಕ್ಷ್ಯಗಳನ್ನು ನಾಶಪಡಿಸಿದ್ದಕ್ಕಾಗಿ ಕೆಟಿ ಮೈಕೆಲ್ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಬಿಐ ನ್ಯಾಯಾಲಯ ಪೋಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ.
ಫಾ. ಥಾಮಸ್ ಎಂ. ಕೊಟ್ಟೂರ್ ಅವರಿಗೆ ನ್ಯಾಯಾಲಯವು ಎರಡು ಜೀವಾವಧಿ ಮತ್ತು ಸಿಸ್ಟರ್ ಸೆಫಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಮೊದಲ ಮತ್ತು ಮೂರನೇ ಆರೋಪಿ ಫಾ. ಥಾಮಸ್ ಕೊಟ್ಟೂರು ಮತ್ತು ಸಿಸ್ಟರ್ ಸೆಫಿ ತಲಾ 5 ಲಕ್ಷ ರೂ. ಫಾ. ಕೊಟ್ಟೂರು 1 ಲಕ್ಷ ರೂ.ಗಳ ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ. ಸಿಸ್ಟರ್ ಅಭಯ ಕೊಲ್ಲಲ್ಪಟ್ಟ 28 ವರ್ಷಗಳ ನಂತರ ಈ ತೀರ್ಪು ಬಂದಿದೆ.