ಕೋಝಿಕ್ಕೋಡ್: ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ಕಾನೂನು ತಿದ್ದುಪಡಿಯ ವಿರುದ್ಧದ ಆಂದೋಲನದ ಮರೆಯಲ್ಲಿ ಪಾಪ್ಯುಲರ್ ಫ್ರಂಟ್ ಕಪ್ಪು ಹಣವನ್ನು ವ್ಯಾಪಕವಾಗಿ ಸ್ವೀಕರಿಸಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಇದಕ್ಕೆ ಹೆಚ್ಚಿನ ಪುರಾವೆಗಳು ದೊರೆತಿವೆ ಎಂದು ಇಡಿ ತಿಳಿಸಿದೆ.
ನಿನ್ನೆ ರಾಜ್ಯದ ಐದು ಸ್ಥಳಗಳಲ್ಲಿ ಇಡಿ ನಡೆಸಿದ ದಾಳಿವೇಳೆ ಹಲವಾರು ಬ್ಯಾಂಕ್ ವಹಿವಾಟು ದಾಖಲೆಗಳು ಮತ್ತು ಲ್ಯಾಪ್‌ಟಾಪ್‌ಗಳು ಕಂಡುಬಂದಿವೆ. ಪಾಪ್ಯುಲರ್ ಫ್ರಂಟ್‌ನ ಕೋಝಿಕ್ಕೋಡ್ ನ ರಾಜ್ಯ ಸಮಿತಿ ಕಚೇರಿಯಲ್ಲಿ ತಪಾಸಣೆ 12 ಗಂಟೆಗಳ ಕಾಲ ನಡೆಯಿತು. ಆದರೆ, ಈ ದಾಳಿ ಕೇಂದ್ರ ಸರ್ಕಾರ ಪ್ರೇರಿತ ಎಂದು ನಾಯಕರ ಬೊಬ್ಬಿರಿದಿದ್ದಾರೆ.
ಇಂದು ಬೆಳಿಗ್ಗೆ ಮಂಜೇರಿಯಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಒಎಂಎ ಸಲಾಮ್ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದರು. ಇದರ ಬೆನ್ನಲ್ಲೇ ಕೋಝಿಕ್ಕೋಡ್ ರಾಜ್ಯ ಸಮಿತಿ ಕಚೇರಿಯಲ್ಲಿ ತಪಾಸಣೆ ನಡೆಸಲಾಯಿತು. ಪೊಲೀಸರು ಪೂಂತುರಾ, ಕಳಮಸ್ಸೆರಿ ಮತ್ತು ಕರಂತೂರ್ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇಡಿ ಮುಖ್ಯವಾಗಿ ಬ್ಯಾಂಕ್ ವಹಿವಾಟುಗಳು, ಪಕ್ಷದ ವಿವಿಧ ಕಾರ್ಯಗಳಿಗಾಗಿ ನಡೆದ ಖರ್ಚು ಮತ್ತು ನಾಯಕರ ವಿದೇಶ ಪ್ರವಾಸಗಳನ್ನು ಪರಿಶೀಲಿಸಿತು.