ಕಾಸರಗೋಡು: ವಿವಾಹ ಸಹಿತ ಸಮಾರಂಭಗಳಿಗೆ ಸ್ಥಳೀಯಾಡಳಿತ ಸಂಸ್ಥೇಗಳ ಮುಂಗಡ ಅನುಮತಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ವೀಡಿಯೋ ಕಾನ್ ಫೆರೆನ್ಸ್ ಮೂಲಕ ಗುರುವಾರ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ರೀತಿ ಅನುಮತಿ ಪಡೆಯುವ ವೇಳೆ ಪೆÇಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್, ಆರೋಗ್ಯ ಕೇಂದ್ರದ ಆರೋಗ್ಯ ಇನ್ಸ್ ಪೆಕ್ಟರ್ ಅವರ ಅನುಮತಿ ಸಹಿತ ಪಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲ ಸ್ಥಲೀಯಾಡಳಿತ ಸಂಸ್ಥೆಗಳು ಸಂಬಂಧಪಟ್ಟ ಸ್ಟೇಷನ್ ಹೌಸ್ ಆಫೀಸರ್ ಗಳ, ಆರೋಗ್ಯ ಇನ್ಸ್ ಪೆಕ್ಟರರ ವಾಟ್ಸ್ ಆಪ್ ನಂಬ್ರ ಪಡೆದಿರಬೇಕು. ಅನುಮತಿ ನೀಡುವ ವೇಳೆಯೂ ಅನುಮತಿ ಪತ್ರದ ನಕಲು ವಾಟ್ಸ ಆಪ್ ಮೂಲಕ ರವಾನಿಸಬೇಕು. ಈ ಸಂಬಮದ ಸಮಗ್ರ ಮಾಹಿತಿ ಹೊಂದಿರುವ ಆದೇಶ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕಳುಹಿಸುವಂತೆ ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಅವರಿಗೆ ಆದೇಶಿಸಲಾಗಿದೆ.
ಇಟೆಲಿ, ಯು.ಕೆ. ಸಹಿತ ಯೂರೋಪ್ಯನ್ ರಾಷ್ಟ್ರ ಗಳಿಂದ ಬಂದವರು ರೂಂ ಕ್ವಾರೆಂಟೈನ್ ಪ್ರವೇಶಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಕೋವಿಡ್ 19 ಸೋಂಕು ಹೊಸರೂಪು ಪಡೆದು ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ರೋಗಲಕ್ಷಣ ಹೊಂದಿರುವವರು ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಭೇಟಿ ಮಾಡಬೇಕು ಎಂದವರು ನುಡಿದರು.
ಈ ನಿಟ್ಟಿನಲ್ಲಿ ವಿದೇಶಗಳಿಂದ ಮರಳುವ ಮಂದಿ ಪೆÇಲೀಸ್, ಡಿ.ಡಿ.ಪಿ. ಅವರಿಗೆ ವಾಟ್ಸ್ ಆಪ್ ಮೂಲಕ ಮಾಹಿತಿ ನೀಡಬೇಕು. ಮಂಗಳೂರು ವಿಮಾನನಿಲ್ದಾಣ ಮೂಲಕ ಊರಿಗೆ ಮರಳುವವರ ಮಾಹಿತಿ ಒದಗಿಸುವಂತೆ ದಕ್ಷಿಣ ಕನ್ನಡ ಡೆಪ್ಯೂಟಿ ಕಮೀಷನರ್ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಕೋವಿಡ್ ಪ್ರತಿರೋಧ ಅಂಗವಾಗಿ ಎಲ್ಲ ಕ್ರಮಗಳನ್ನೂ ಕಟ್ಟುನಿಟ್ಟಿನಿಂದ ಮುಂದುವರಿಸಲಾಗುವುದು. ಜನಗುಂಪು ಸೇರುವುದು, ಪಂದ್ಯಾಟ ನಡೆಸುವುದು, ಉತ್ಸವ ಆಚರಣೆ ಇತ್ಯಾದಿಗಳಿಗೆ ಅನುಮತಿಯಿಲ್ಲ. ಜಿಲ್ಲೆಯ ಹಲವೆಡೆ ರಾತ್ರಿ 9 ಗಂಟೆಯ ನಂತರವೂ ತಳ್ಳುಗಾಡಿಗಳ ಚಟುವಟಿಕೆ ನಡೆಯುತ್ತಿರುವ ಮಾಹಿತಿಗಳಿದ್ದು, ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಹೈಯರ್ ಸೆಕೆಂಡರಿ, ಪ್ರೌಢಶಾಲೆ ಶಿಕ್ಷಕರಿಗೆ ಶಾಲಾರಂಭ ಸಂಬಂಧ ಹೊಣೆಗಾರಿಕೆ ಇರುವ ಹಿನ್ನೆಲೆಯಲ್ಲಿ ಡಿ.ಡಿ.ಇ. ಅವರ ಮನವಿ ಹಿನ್ನೆಲೆಯಲ್ಲಿ ಇಂಥಾ ಶಿಕ್ಷಕರನ್ನು ಮಾಸ್ಟರ್ ಯೋಜನೆಯಿಂದ ಕೈಬಿಡಲಾಗಿದೆ. ಆದರೆ ಪ್ರಾಥಮಿಕ ವಿಭಾಗ ಶಿಕ್ಷಕರನ್ನು ಈ ನಿಟ್ಟಿನಲ್ಲಿ ಬಳಸಲಾಗುತ್ತಿದ್ದು ಹೆಚ್ಚುವರಿ ಚುರುಕಿನೊಂದಿಗೆ ಯೋಜನೆ ಮುಂದುವರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ವಾರ್ಡ್ ಮಟ್ಟದ ಜನಜಾಗೃತಿ ಸಮಿತಿಗಳ ಸಭೆ ತುರ್ತು ನಡೆಸಿ ಚಟುವಟಿಕೆ ಚುರುಕುಗೊಳಿಸಬೇಕು ಎಂದವರು ಆದೇಶ ನೀಡಿದರು. ಕ್ರಿಸ್ಮಸ್, ಹೊಸವರ್ಷಾಚರಣೆ ಸಮಾರಂಭಗಳಲ್ಲಿ ಗರಿಷ್ಠ 100 ಮಂದಿ ಮಾತ್ರ ಭಾಗವಹಿಸಬಹುದಾಗಿದ್ದು, ಕೋವಿಡ್ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕ್ರೀಡಾ ಪಂದ್ಯಾಟಗಳನ್ನು ನಡೆಸಲು ಅನುಮತಿಯಿಲ್ಲ ಎಂದವರು ನುಡಿದರು.