HEALTH TIPS

ದೇಶದ ಘನತೆಗೆ ಧಕ್ಕೆಯಾಗುವುದನ್ನು ಸಹಿಸೆವು: ರಾಜನಾಥ್‌ ಸಿಂಗ್

      ಹೈದರಾಬಾದ್‌: ಚೀನಾದೊಂದಿಗಿನ ಗಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಭಾರತ ಬಯಸುತ್ತದೆ. ಆದರೆ, ದೇಶದ ಘನತೆ-ಗೌರವಕ್ಕೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶನಿವಾರ ಹೇಳಿದ್ದಾರೆ.

      ಇಲ್ಲಿಗೆ ಸಮೀಪದ ದುಂಡಿಗಲ್‌ ವಾಯುನೆಲೆಯಲ್ಲಿ ಶನಿವಾರ ನಡೆದ ಪದವಿ ಪ್ರದಾನ ಹಾಗೂ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

       ಗಡಿಯಲ್ಲಿ ಉದ್ಭವಿಸಿರುವ ಸಂಘರ್ಷವನ್ನು ಶಮನಗೊಳಿಸಲು ಭಾರತ ಮತ್ತು ಚೀನಾ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿರುವ ಮಧ್ಯೆಯೇ ಸಚಿವ ರಾಜನಾಥ್‌ ಸಿಂಗ್‌ ಅವರು ಚೀನಾಕ್ಕೆ ಮತ್ತೊಮ್ಮೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

'ಲಡಾಖ್‌ನ ಪೂರ್ವಗಡಿಯಲ್ಲಿ ಉದ್ಭವಿಸಿರುವ ಸಂಘರ್ಷಮಯ ಸ್ಥಿತಿಯನ್ನು ಭಾರತ ಸಮರ್ಥವಾಗಿ ನಿಭಾಯಿಸಿದೆ. ತಾನು ದುರ್ಬಲ ರಾಷ್ಟ್ರವಲ್ಲ. ಯಾವುದೇ ಉದ್ವಿಗ್ನ ಸ್ಥಿತಿ, ಉಲ್ಲಂಘನೆ ಅಥವಾ ಏಕಪಕ್ಷೀಯ ಕ್ರಮಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಮರ್ಥ ಎಂಬುದನ್ನು ಸಹ ಭಾರತ ಸಾಬೀತುಪಡಿಸಿದೆ' ಎಂದರು.

      'ಗಡಿಯಲ್ಲಿನ ಸಂಘರ್ಷವನ್ನು ಶಮನಗೊಳಿಸಲು ಭಾರತ ಕೈಗೊಂಡ ಕ್ರಮಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕೆಲವು ದೇಶಗಳಿಂದ ಬೆಂಬಲವೂ ದೊರೆತಿದೆ' ಎಂದರು.


'ನಮಗೆ ಸಂಘರ್ಷ ಬೇಡ, ಶಾಂತಿ ಬೇಕು. ಆದರೆ, ದೇಶದ ಸ್ವಾಭಿಮಾನ, ಘನತೆಗೆ ಚ್ಯುತಿ ಬರುವುದನ್ನು ಸಹಿಸೆವು' ಎಂದು ಅವರು ಪುನರುಚ್ಚರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries