ಕಾಸರಗೋಡು: ಕಾಸರಗೋಡು ಸಿವಿಲ್ ಸಟೇಷನ್ ನಲ್ಲಿ ನೇರ್ ವಳಿ ಪೋಸ್ಟರ್ ಪ್ರದರ್ಶನ ಜರುಗಿತು.
ಅಂತಾರಾಷ್ಟ್ರೀಯ ಮಾನವ ಹಕ್ಕು ದಿನಾಚರಣೆ ಮತ್ತು ಬೇಷನ್ ಸಪ್ತಾಹ ಅಂಗವಾಗಿ ಜಿಲ್ಲಾ ಪ್ರೊಬೇಷನ್ ಕಚೇರಿ ಆಶ್ರಯದಲ್ಲಿ ಸಮಾರಂಭ ನಡೆಯಿತು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಉದ್ಘಾಟಿಸಿದರು. ಜಿಲ್ಲಾ ಪ್ರೊಬೇಷನ್.ಕಿರಿಯ ವರಿಷ್ಠಾಧಿಕಾರಿ ಎಂ.ಅಬ್ದುಲ್ಲ, ಡಿ.ಸಿ.ಪಿ.ಯು.ಚೈಲ್ಡ್ ರೆಸ್ಕ್ಯೂ ಅಧಿಕಾರಿ ಬಿ.ಅಶ್ವಿನ್, ಬಿ.ಸಲಾವುದ್ದೀನ್ ಉಪಸ್ಥಿತರಿದ್ದರು. ನಂತರ ವಿವಿಧ ವಿಷಯಗಳಲ್ಲಿ ಪರಿಣತರಿಂದ ಉಪನ್ಯಾಸ ನಡೆದುವು.