ಕುಂಬಳೆ: ವಯೋಸಹಜ ಬಳಲುವಿಕೆ ಮತದಾನಕ್ಕೆ ತಡೆಯಾಗದೆ ವಯೋವೃದ್ಧ ದಂಪತಿ ಮತಗಟ್ಟೆಯಲ್ಲಿ ಗಮನ ಸೆಳೆದಿದ್ದಾರೆ.
ಕುಂಬಳೆಯ ರಾಮಚಂದ್ರ ಆಚಾರ್ ಅವರಿಗೆ ಈಗ ವಯಸ್ಸು 88, ಅವರ ಪತ್ನಿ ರತ್ಮಾವತಿ ಅವರಿಗೆ 83 ವರ್ಷ. ಇಬ್ಬರೂ ತಮ್ಮ ವಯೋಮಾನದ ಬಳಲುವಿಕೆಯನ್ನು ಲೆಕ್ಕಿಸದೆ ಮತದಾನ ನಡೆಸಲು ಆಗಮಿಸಿದ್ದರು. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಸಾಲೆಯ 23ನೇ ವಾರ್ಡಿನ 2ನೇ ನಂಬ್ರ ಮತಗಟ್ಟೆಯಲ್ಲಿ ಅವರು ಮತದಾನ ನಡೆಸಿದ್ದರು. ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಸಹಾಯದೊಂದಿಗೆ ಮತಗಟ್ಟೆಯನ್ನು ಪ್ರವೇಶಿಸಿದ ಅವರು, ಅವರ ಸಹಾಯದಿಂದಲೇ ಮತದಾನ ಪ್ರಕ್ರಿಯೆಯನ್ನು ಪೂರೈಸಿದ್ದರು. ಇವರ ಜತೆಗೆ ಬಂದಿದ್ದ ವ್ಯಕ್ತಿಯೊಬ್ಬರು ಓಪನ್ ಓಟ್ ನಡೆಸಿದ್ದರು.